ಜಮ್ಮು: ಗಡಿ ಪ್ರದೇಶದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಯಲು ರಿಮೋಟ್ ಕಂಟ್ರೋಲ್ ಆಧಾರಿತ ಮೆಷಿನ್ ಗನ್ಗಳನ್ನು ನಿಯೋಜಿಸಲು ಸೇನೆ ಮುಂದಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ಮೆಷಿನ್ ಗನ್ ಜಮ್ಮುವಿನ ಪೀರ್ ಪಾಂಜಲ್ನಲ್ಲಿ ವರ್ಷಾಂತ್ಯಕ್ಕೆ ಕಾರ್ಯ ಆರಂಭಗೊಳ್ಳಲಿದೆ.
ಗಡಿ ಪ್ರದೇಶದಲ್ಲಿ ಇನ್ಫ್ರಾರೆಡ್ ಸನ್ಸಾರ್ಗಳನ್ನು ಗಡಿ ನಿಯಂತ್ರಣ ರೇಖೆ (ಎಲ್ಒಸಿ)ವರೆಗೆ ಹರಿಯಬಿಡಲಾಗುತ್ತದೆ. ರೋಟರ್ ಮೇಲಿರುವ ಗನ್ ಹಾಗೂ ಸೆನ್ಸಾರ್ನ್ನು ಸಂಪರ್ಕಿಸಲಾಗುತ್ತಿದ್ದು, ಇದರ ಅಂತರ 50 ಮೀಟರ್ನಿಂದ 2 ಕಿ.ಮೀ.ವರೆಗೆ ಇರಲಿದೆ. ಉಗ್ರರ ಒಳನುಸುಳುವಿಕೆ ಸಂದರ್ಭ ಈ ಸೆನ್ಸಾರ್ ಮೂಲಕ ಸೈರನ್ ಮೊಳಗುತ್ತದೆ. ರಾತ್ರಿ ಹೊತ್ತು ಸ್ಪಷ್ಟವಾಗಿ ಕಾಣಲು ನೇರ ದೃಶ್ಯಗಳನ್ನು ಬಿತ್ತರಿಸುವ ಕ್ಯಾಮೆರಾ ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.