ಕಾಶ್ಮೀರ: ಪಾಕಿಸ್ಥಾನ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ನಿವಾಸಿಗಳ ಮೇಲೆ ಭಾರಿ ದಮನಕಾರಿ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಭಾರೀ ತೆರಿಗೆ, ಅಧಿಕ ಹಣದುಬ್ಬರ ಮತ್ತು ವಿದ್ಯುತ್ ಕೊರತೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಿಒಕೆ ನಾಗರಿಕರ ಮೇಲೆ ಪಾಕಿಸ್ತಾನದ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಪಿಒಕೆಯಲ್ಲಿ ಪಾಕಿಸ್ಥಾನ ಆಡಳಿತದ ದಮನಕಾರಿ ನೀತಿ ಹೊಸದಲ್ಲ. ಇಂದು ಕೂಡ ಹಲವಾರು ಪ್ರತಿಭಟನಾಕಾರರು ಮೆರವಣಿಗೆಯನ್ನು ನಡೆಸಿ ಪಾಕಿಸ್ಥಾನದ ನೀತಿಗಳನ್ನು ಖಂಡಿಸಿದ್ದಾರೆ. ಆದರೆ ಇವರ ಮೇಲೆ ದರ್ಪ ಮತ್ತು ದೌರ್ಜನ್ಯಗಳನ್ನು ಎಸಗಲಾಗಿದೆ.
ಪಾಕಿಸ್ತಾನದ ರೇಂಜರ್ಗಳು ಮತ್ತು ಸ್ಥಳೀಯ ಪೊಲೀಸರು ಗಾಳಿಯಲ್ಲಿ ಅಶ್ರುವಾಯು, ಪೆಲೆಟ್ಗಳು ಮತ್ತು ಗುಂಡುಗಳನ್ನು ಹಾರಿಸುವ ಮೂಲಕ ಪಿಒಕೆ ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪೊಲೀಸರು ಮತ್ತು ಅರೆಸೇನಾಪಡೆ ನಡೆಸಿದ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.