ನವದೆಹಲಿ: ಭಾರತೀಯ ವೈದ್ಯರು ಮತ್ತೊಮ್ಮೆ ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹಂತ-4ರ ಗುದನಾಳದ ಕ್ಯಾನ್ಸರ್ನಿಂದ ಬಳಲುತ್ತಿರುವ ಇರಾಕ್ನ 47 ವರ್ಷದ ವ್ಯಕ್ತಿಗೆ ಭಾರತದ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಜೀವನವನ್ನು ನೀಡಿದ್ದಾರೆ.
ಇರಾಕಿನ 47 ವರ್ಷದ ವ್ಯಕ್ತಿಗೆ ಆರಂಭದಲ್ಲಿ ಪೈಲ್ಸ್ ಇರುವುದು ಪತ್ತೆಯಾಯಿತು ಮತ್ತು ಅ ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬಳಿಕ ಅದು ಪೈಲ್ಸ್ ಅಲ್ಲ ಗುದನಾಳದ ಕ್ಯಾನ್ಸರ್ ಎಂಬುದು ತಿಳಿದು ಬಂತು. ಸ್ಥೂಲಕಾಯದ ರೋಗಿಯನ್ನು ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತರುವ ಮೊದಲು ಅನೇಕ ಕೀಮೋಥೆರಪಿ ಮತ್ತು ವಿಕಿರಣ ಸೆಷನ್ಗಳನ್ನು ನಡೆಸಲಾಗಿತ್ತು. ಆದರೆ ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ.
“ರೋಗಿಗೆ ಈ ಹಿಂದೆ ತಪ್ಪಾಗಿ ಚಿಕಿತ್ಸೆ ಮಾಡಲಾಗಿದ್ದರಿಂದ ಇದು ಸವಾಲಿನ ಪ್ರಕರಣವಾಗಿತ್ತು ಮತ್ತು ಅವರು 122 ಕೆಜಿ ತೂಕ ಹೊಂದಿದ್ದು ಚಿಕಿತ್ಸೆಗೆ ಸಂಕೀರ್ಣತೆಯನ್ನು ಹೆಚ್ಚಿಸಿತ್ತು” ಎಂದು ಮಣಿಪಾಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಂಕೊಲಾಜಿ ಸಲಹೆಗಾರ ಡಾ. ಸಂಜೀವ್ ಕುಮಾರ್ ದ್ವಾರಕಾ ತಿಳಿಸಿದ್ದಾರೆ.
ಅಲ್ಲದೇ ಭಾರತಕ್ಕೆ ಬಂದ ನಂತರ ವ್ಯಕ್ತಿಗೆ ಪೆರಿಟೋನಿಯಲ್ ಕಾಯಿಲೆ ಇರುವುದನ್ನು ಕೂಡ ವೈದ್ಯರು ಪತ್ತೆ ಹಚ್ಚಿದರು. ಇದು ಕೂಡ ಒಂದು ಬಗೆಯ ಕ್ಯಾನ್ಸರ್. ಪೆರಿಟೋನಿಯಲ್ ಕಾಯಿಲೆಯು ಒಂದು ಕ್ಯಾನ್ಸರ್ ಆಗಿದ್ದು ಅದು ಹೊಟ್ಟೆಯೊಳಗಿನ ಅಂಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ಕಿಬ್ಬೊಟ್ಟೆಯ ಗೋಡೆಯ ಒಳಪದರ ಮತ್ತು ಮೇಲ್ಮೈಗೆ ಹರಡುತ್ತದೆ. ಸಾಮಾನ್ಯವಾಗಿ, ಹಂತ IV ಕ್ಯಾನ್ಸರ್ ಗುಣಪಡಿಸಲಾಗದು. ಆದರೆ ಪೆರಿಟೋನಿಯಲ್ ಕಾಯಿಲೆಗೆ ಚಿಕಿತ್ಸೆ ನೀಡಬಹುದು. ಕೊನೆಗೆ ವೈದ್ಯರ ತಂಡ ಶ್ರಮಪಟ್ಟು ಶಸ್ತ್ರಚಿಕಿತ್ಸೆ ನಡೆಸಿ ರೋಗಿಯನ್ನು ಗುಣಮುಖರನ್ನಾಗಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.