ಈ ಬಾರಿಯ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರಿಗೆ ಬೈಂದೂರು ಮಂಡಲದಲ್ಲಿ ಒಂದು ಲಕ್ಷ ಮತಗಳ ಅಂತರ ಒದಗಿಸುವ ಮುಖೇನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಬರಮಾಡಿಕೊಳ್ಳುವ ಸಂಕಲ್ಪದೊಂದಿಗೆ ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವಂತಹ ಕಾರ್ಯಕ್ರಮವನ್ನು ಶಾಸಕ ಗಂಟಿಹೊಳೆ ಅವರು ರೂಪಿಸಿದ್ದಾರೆ. ಮೋದಿಯವರನ್ನು ಕೊಲ್ಲೂರಿಗೆ ಕರೆಸಬೇಕು ಮತ್ತು ಬಿಜೆಪಿ ಅಭ್ಯರ್ಥಿಗೆ ಬೈಂದೂರು ಕ್ಷೇತ್ರದಲ್ಲಿ 1 ಲಕ್ಷ ಲೀಡ್ ಕೊಡಿಸಬೇಕು ಎನ್ನುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವುದು ವಿಶೇಷವಾಗಿದೆ.
ಬೂತ್ ಗೆಲ್ಲುವ ಸಂಕಲ್ಪದೊಂದಿಗೆ ನಿರಂತರವಾಗಿ 18 ದಿನಗಳ ಕಾಲ ಕ್ಷೇತ್ರದ ಎಲ್ಲಾ ಬೂತ್ಗಳನ್ನು ತಲುಪುವ ಸಂಕಲ್ಪ ಇಟ್ಟುಕೊಂಡು ಈ ಒಂದು ಪರಿಕ್ರಮ ಯಾತ್ರೆಗೆ ಮುನ್ನುಡಿ ಬರೆದಿದ್ದಾರೆ.
ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವಂತಹ ಪರಿಕಲ್ಪನೆ ಇಟ್ಟುಕೊಂಡು ಮಂಡಲದ 244 ಬೂತ್ ಮತ್ತು 2 ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ, ಹಿರಿಯರ ಸಹಕಾರದೊಂದಿಗೆ ಪ್ರತಿ ಬೂತ್ನ ಮನೆಗಳಿಗೆ ತೆರಳುತ್ತಿದ್ದಾರೆ ಇಲ್ಲಿನ ಶಾಸಕರು. ಬೂತ್ನ ಎಲ್ಲಾ ಮತಗಳು ಬಿಜೆಪಿ ಪಕ್ಷಕ್ಕೆ ಬೀಳುವಂತೆ ಮಾಡುವುದು ಶಾಸಕರ ಉದ್ದೇಶವಾಗಿದೆ. ಮೋದಿ ಅವರನ್ನು ಕೊಲ್ಲೂರಿಗೆ ಕರೆಸುವ ಸಂಕಲ್ಪವನ್ನು ಜನರಿಗೆ ತಿಳಿಸಿ ಮತದಾರರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಹೆಚ್ಚಿನ ಮತದಾನಕ್ಕೆ ಪ್ರೇರಣೆ ನೀಡುತ್ತಿದ್ದಾರೆ.
ನಿಮಗೆ ನಮ್ಮ ಕ್ಷೇತ್ರದಲ್ಲಿ 1 ಲಕ್ಷ ಲೀಡ್ ಒದಗಿಸುತ್ತೇವೆ ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲೂರಿಗೆ ಬರುವಂತೆ ಮಾಡಬೇಕು ಮತ್ತು ಕೊಲ್ಲೂರು ಕಾರಿಡಾರ್ ನಿರ್ಮಿಸಿ ಕೊಲ್ಲೂರಿನ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವ ಜನ ಸಂಕಲ್ಪವನ್ನು ಸಂಸದರಾದ ರಾಘವೇಂದ್ರ ಅವರಲ್ಲಿ ಶಾಸಕರು ಇಟ್ಟಿದ್ದಾರೆ. ಸಂಸದರು ಇದಕ್ಕೆ ಪೂರಕವಾದ ಭರವಸೆ ಕೂಡಾ ನೀಡಿದ್ದಾರೆ. ಇದು ಕಾರ್ಯಕರ್ತರಲ್ಲಿ ಮತ್ತು ಮತದಾರರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಬೂತ್ ಕಡೆಗೆ ಸಮೃದ್ಧ ನಡಿಗೆಯಂತಹ ಸಂಘಟನಾತ್ಮಕ ಚಟುವಟಿಕೆ ಪಕ್ಷದ ಬೇರು ಮಟ್ಟದಲ್ಲಿ ನಡೆಯುತ್ತಿರುವುದು ಅತ್ಯಂತ ಶ್ಲಾಘನಾರ್ಹ ಬೆಳವಣಿಗೆ. ಏಕೆಂದರೆ ಬೂತ್ ಮಟ್ಟದಲ್ಲಿ ನಾವು ಎಷ್ಟು ಆಳವಾಗಿ ಕಾರ್ಯಾಚರಿಸುತ್ತೇವೆ ಎನ್ನುವುದರ ಫಲಿತಾಂಶ ಚುನಾವಣಾ ದಿನದಂದು ಗೋಚರವಾಗಲಿದೆ.
ಬೂತ್ ಗೆದ್ದರೆ ದೇಶ ಗೆದ್ದಂತೆ ಎಂಬ ಮಾತಿನಂತೆ ಭಾರತೀಯ ಜನತಾ ಪಾರ್ಟಿಯು ಬೂತ್ ಮಟ್ಟದಲ್ಲಿ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪಕ್ಷ ಯಾವುದೇ ಚಟುವಟಿಕೆ ಕೈಗೊಂಡರೂ ಅದು ಬೂತ್ ಮಟ್ಟದಲ್ಲಿ ಆರಂಭಗೊಂಡು, ವಿಸ್ತಾರಗೊಳ್ಳಬೇಕು ಎನ್ನುವ ಧ್ಯೇಯ ಬಿಜೆಪಿಯದ್ದು. ರಾಜಕೀಯವಾಗಿ ನೋಡಿದಾಗ ಇದು ನಿಜಕ್ಕೂ ಯಾವುದೇ ಪಕ್ಷಗಳು ಸಾಗಬೇಕಾದ ಹಾದಿಯಾಗಿ ತೋರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ಬಿಜೆಪಿಯ ಸಂಘಟನಾ ವ್ಯವಸ್ಥೆ ಬಲಿಷ್ಠವಾಗಿದೆ. ಬೂತ್ ಮಟ್ಟದ ಕಾರ್ಯಗಳು ರಿಸಲ್ಟ್ ತಂದುಕೊಡಬಲ್ಲ ದಾರಿಯಾಗಿವೆ. ಈ ಚಿಂತನೆಯನ್ನು ಬೈಂದೂರು ಶಾಸಕರಾದ ಗಂಟಿಹೊಳೆ ಅವರು ಯೋಜನೆಯೊಂದಿಗೆ ರೂಪುರೇಷೆಗಳನ್ನು ಹಾಕಿಕೊಂಡು ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿದ್ದು, ಈ ಬಗ್ಗೆ ಅನೇಕರಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.