ನವದೆಹಲಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮೋದಿ ಸರ್ಕಾರ ಕಟ್ಟಾ ವಿರೋಧಿ, ಲೇಖಕಿ ಮಿನಿ ನಾಯರ್ ಅವರನ್ನು ತುಂಬಾ ಸ್ಮಾರ್ಟ್ ಆಗಿ ಸೋಶೀಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.
ಇತ್ತೀಚೆಗೆ ಉದ್ಘಾಟನೆಗೊಂಡ ತಲಶ್ಶೇರಿ-ಮಾಹೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಕುರಿತು ಲೇಖಕಿ ಮಿನಿ ನಾಯರ್ ಅವರು ಎಕ್ಸ್ ಪೋಸ್ಟ್ ಮಾಡಿ, “ಇದು ಸ್ಪೇನ್ ಅಥವಾ ಗ್ರೀಸ್ ಅಲ್ಲ. ಇದು ಕೇರಳ” ಎಂದು ಒಕ್ಕಣೆ ಬರೆದು ಹೆದ್ದಾರಿಯ ವಿಹಂಗಮ ನೋಟದ ಪೋಟೋ ಹಂಚಿಕೊಂಡಿದ್ದಾರೆ. ಕೇರಳ ಮಾಡೆಲ್ ಪ್ರತಿಪಾದಕಿಯಾಗಿರುವ ಅವರು ಕೇರಳ ಸರ್ಕಾರಕ್ಕೆ ಕ್ರೆಡಿಟ್ ನೀಡುವ ಸಲುವಾಗಿಯೇ ಈ ಪೋಸ್ಟ್ ಹಂಚಿಕೊಂಡಿದ್ದರು ಎಂಬುದು ನೆಟಿಜನ್ಗಳ ಪ್ರತಿಪಾದನೆ.
ಕೆಲವು ಗಂಟೆಗಳ ನಂತರ, ಗಡ್ಕರಿ ಅವರು ಬೈಪಾಸ್ನ ಅದೇ ಫೋಟೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ, “ಕೇರಳದ ತಲಸ್ಸೆರಿ-ಮಾಹೆ ಬೈಪಾಸ್ನ ರಮಣೀಯ ಮೋಡಿಮಾಡುವ ಸೌಂದರ್ಯವನ್ನು ಅನ್ವೇಷಿಸಿ. ಪ್ರಕೃತಿಯ ವಿಸ್ಮಯ ಕಾಯುತ್ತಿದೆ!” ಎಂದು ಒಕ್ಕಣೆ ಬರೆದಿದ್ದಾರೆ. ಮಾತ್ರವಲ್ಲ ಪೋಟೋ ಕೃಪೆ ಮಿನಿ ನಾಯರ್ ಎಂದು ಬರೆದು ಆಕೆಯನ್ನು ಸೊಗಸಾಗಿಯೇ ಟ್ರೋಲ್ ಮಾಡಿದ್ದಾರೆ.
ಗಡ್ಕರಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದ್ದು ಎಲ್ಲರೂ ಅವರು ಟ್ರೋಲ್ ಮಾಡಿದ ರೀತಿಯನ್ನು ಕೊಂಡಾಡುತ್ತಿದ್ದಾರೆ.
This @minicnair thought she is propagating the "#Kerala Model"
Nitin Gadkari trolled her without any words because it was his work🤣😭🔥#NitinGadkari #GatiShakti #PragatiKaHighway pic.twitter.com/BL4IRbpC37
— Pooja Sangwan ( Modi Ka Parivar ) (@ThePerilousGirl) April 9, 2024
This is not Greece or Spain. This is Kerala!!!
Thalasherry-Mahe Bypass pic.twitter.com/KMjUGY6s3g
— Mini Nair (@minicnair) April 9, 2024
Explore the scenic mesmerizing beauty of Thalassery-Mahe Bypass 🛣️, Kerala. Nature's wonder awaits!
Courtesy: @minicnair #PragatiKaHighway #GatiShakti #BuildingTheNation #ModiKiGuarantee pic.twitter.com/1UpswMYPok
— Nitin Gadkari (@nitin_gadkari) April 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.