ನವದೆಹಲಿ: ಯುದ್ಧ ವಿಮಾನಗಳ ಕೊರತೆಯ ನಡುವೆಯೂ, 36 ರಾಫೆಲ್ ಜೆಟ್ ವಿಮಾನಗಳ ಫ್ರಾನ್ಸ್ ಜೊತೆಗಿನ ಒಪ್ಪಂದ ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆ ಇದೆ. ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಪ್ರವಾಸದ ಸಂದರ್ಭ ಈ ಒಪ್ಪಂದ ಮಾಡಲಾಗಿದ್ದು, ಇದರ ಕಾರ್ಯ ಮುಂದುವರೆಯುತ್ತಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ತಿಳಿಸಿದ್ದಾರೆ.
ರಾಫೆಲ್ನ ಮೊದಲ ಎರಡು ತುಕಡಿಗಳನ್ನು ಕಾರ್ಯರೂಪಕ್ಕೆ ತರಲು 2ರಿಂದ 3 ವರ್ಷ ತೆಗೆಯಲಿದೆ. ಕನಿಷ್ಟ ಆರು ಮಧ್ಯಮ ಬಹುಕಾರ್ಯಗಳನ್ನು ನಿರ್ವಹಿಸುವ ಯುದ್ಧ ವಿಮಾನಗಳ ಅಗತ್ಯವಿದ್ದು, ಇದರ ಸ್ವಾಧೀನದ ನಿರ್ಣಯವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.