ಟೆಲ್ ಅವಿವ್: ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವುದಾಗಿ ಇಸ್ರೇಲ್ ಘೋಷಿಸಿದೆ. ಅಲ್ಲದೇ ಇದನ್ನು ಉಗ್ರರ ವಾಹಿನಿ ಎಂದು ಟೀಕಿಸಿದೆ.
ಕತಾರ್ ಮೂಲದ ಅಲ್ ಜಜೀರಾ ಸುದ್ದಿ ವಾಹಿನಿ ಇಸ್ರೇಲ್ನಲ್ಲಿ ನಿಷೇಧವಾಗಲಿದೆ. ಇಸ್ರೇಲ್ ಸಂಸತ್ತು ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಸೋಮವಾರ ಅನುಮೋದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಸೂದೆ ಮೂಲಕ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರವನ್ನು ಇಸ್ರೇಲ್ ಸರ್ಕಾರ ಪಡೆದುಕೊಂಡಿದೆ.
ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ಕೂಡಲೇ ಇಸ್ರೇಲ್ನಲ್ಲಿ ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ನೆತನ್ಯಾಹು ಘೋಷಣೆ ಮಾಡಿದ್ದಾರೆ. ಅಲ್ ಜಜೀರಾವನ್ನು ಉಗ್ರರ ವಾಹಿನಿ ಎಂದು ನೆತನ್ಯಾಹು ಕರೆದಿದ್ದಾರೆ.
ಗಾಜಾದಲ್ಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲ್ ಜಜೀರಾ ಸಿಬ್ಬಂದಿ ಪತ್ರಕರ್ತ ಮತ್ತು ಸ್ವತಂತ್ರ ಉದ್ಯೋಗಿ ಭಯೋತ್ಪಾದಕರು ಎಂದು ಇಸ್ರೇಲ್ ಜನವರಿಯಲ್ಲಿ ಹೇಳಿಕೊಂಡಿತ್ತು. ಗಾಯಗೊಂಡ ಚಾನೆಲ್ನ ಇನ್ನೊಬ್ಬ ಪತ್ರಕರ್ತ ಹಮಾಸ್ ಡೆಪ್ಯುಟಿ ಕಂಪನಿ ಕಮಾಂಡರ್ ಎಂದು ಇಸ್ರೇಲ್ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.