ನವದೆಹಲಿ: ಚುನಾವಣಾ ಬಾಂಡ್ ವಿವಾದವು ತಮ್ಮ ಪಕ್ಷ ಮತ್ತು ಆಡಳಿತಕ್ಕೆ ಹೊಡೆತ ನೀಡಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಳ್ಳಿಹಾಕಿದ್ದಾರೆ. ಪ್ರತಿಯೊಂದು ವ್ಯವಸ್ಥೆಯು ದೋಷಗಳನ್ನು ಹೊಂದಿದ್ದು ಅದನ್ನು ಪರಿಹರಿಸಬಹುದು ಎಂದು ಅವರು ಹೇಳಿದ್ದಾರೆ.
ಚುನಾವಣಾ ಬಾಂಡ್ ವಿಷಯದ ಬಗ್ಗೆ ಕುಣಿಯುತ್ತಿರುವವರು ನಂತರ ಪಶ್ಚಾತ್ತಾಪ ಪಡುತ್ತಾರೆ ಎಂದು ಎಚ್ಚರಿಸಿದ ಮೋದಿ, ತಮ್ಮ ಸರ್ಕಾರವು ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕೆ ನಿಧಿಯ ಮೂಲಗಳನ್ನು ಪತ್ತೆ ಹಚ್ಚುವಿಕೆ ಮತ್ತು ಫಲಾನುಭವಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಕಾರಣವೆಂದು ಹೇಳಿದರು. ಬಾಂಡ್ ವ್ಯವಸ್ಥೆಯು ಪಾರದರ್ಶಕತೆಯನ್ನು ಸ್ಥಾಪಿಸಿದೆ ಎಂದ ಅವರು, 2014 ರ ಹಿಂದಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಂಸ್ಥೆಯು ಅಂತಹ ಚುನಾವಣಾ ನಿಧಗಳ ಮೂಲಗಳ ಮಾಹಿತಿಯನ್ನು ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
“ನಾವು ಮಾಡಿದ್ದನ್ನು ನಾವು ಹಿನ್ನಡೆಯಾಗಿ ನೋಡಬೇಕೇ? ಬಾಂಡ್ ವಿವರಗಳನ್ನು ಬಹಿರಂಗಪಡಿಸಿದ ಬಗ್ಗೆ ಸಂಭ್ರಮಿಸುವವರು ಮತ್ತು ಹೆಮ್ಮೆಪಡುವವರು ತಮ್ಮ ಕ್ರಮಗಳಿಗೆ ಪಶ್ಚಾತ್ತಾಪ ಪಡುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಪ್ರಧಾನಿ ಥಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ಯಾವುದೇ ವ್ಯವಸ್ಥೆಯು ಪರಿಪೂರ್ಣವಾಗಿರುವುದಿಲ್ಲ. ನ್ಯೂನತೆಯನ್ನು ಒಳಗೊಂಡಿರುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.