ನವದೆಹಲಿ: 514 ಹಾಲಿ ಲೋಕಸಭೆ ಸಂಸದರ ಪೈಕಿ 225 (ಶೇ. 44) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ಸ್ವಯಂ ಪ್ರಮಾಣ ಪತ್ರಗಳು ತಿಳಿಸಿವೆ.
ವಿಶ್ಲೇಷಿಸಿದವರಲ್ಲಿ ಶೇ 5ರಷ್ಟು ಮಂದಿ ಕೋಟ್ಯಾಧಿಪತಿಗಳಾಗಿದ್ದು, ಅವರ ಆಸ್ತಿ ರೂ. 100 ಕೋಟಿ ಮೀರಿದೆ.
ಹಾಲಿ ಸಂಸದರ ಅಫಿಡವಿಟ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಎಡಿಆರ್ನ ವರದಿಯು, ಕ್ರಿಮಿನಲ್ ಆರೋಪ ಹೊತ್ತಿರುವ ಹಾಲಿ ಸಂಸದರ ಪೈಕಿ ಶೇಕಡಾ 29 ರಷ್ಟು ಮಂದಿ ಕೊಲೆ, ಕೊಲೆ ಯತ್ನ, ಕೋಮು ಸೌಹಾರ್ದತೆ ಕೆಡವಲು ಉತ್ತೇಜನ ನೀಡಿದ ಆರೋಪಗಳು, ಅಪಹರಣ, ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ಹಾಲಿ ಸಂಸದರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದು, ಒಂಬತ್ತು ಮಂದಿ ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಇದಲ್ಲದೆ, 28 ಹಾಲಿ ಸಂಸದರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ.
ಅದೇ ರೀತಿ, 16 ಹಾಲಿ ಸಂಸದರು ಮೂರು ಅತ್ಯಾಚಾರದ ಆರೋಪಗಳನ್ನು ಒಳಗೊಂಡಂತೆ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.