ನವದೆಹಲಿ: ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ವೈಮಾನಿಕ ಶಕ್ತಿಯನ್ನು ಶತ್ರುಗಳ ಗಡಿರೇಖೆಯನ್ನು ಮೀರಿ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬುದನ್ನು ಬಾಲಾಕೋಟ್ನಂತಹ ಕಾರ್ಯಾಚರಣೆಗಳು ತೋರಿಸಿದೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ʼಭವಿಷ್ಯದ ಸಂಘರ್ಷಗಳಲ್ಲಿ ವಾಯು ವಲಯದ ಶಕ್ತಿʼ ಎಂಬ ಕುರಿತು 15 ನೇ ಜಂಬೋ ಮಜುಂದಾರ್ ಅಂತರಾಷ್ಟ್ರೀಯ ಸೆಮಿನಾರ್ನಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಚೌಧರಿ ಅವರು, ಆಯಕಟ್ಟಿನ ಪ್ರಯೋಜನವನ್ನು ನಿರ್ಮಿಸಲು ರಾಷ್ಟ್ರಗಳು ಬಾಹ್ಯಾಕಾಶ-ಆಧಾರಿತ ಸ್ವತ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಬಾಹ್ಯಾಕಾಶದ ಮಿಲಿಟರೀಕರಣ ಮತ್ತು ಆಯುಧೀಕರಣವು ಅನಿವಾರ್ಯ ಎಂದು ಹೇಳಿದರು.
ವಾಯು ಮತ್ತು ಬಾಹ್ಯಾಕಾಶ ನಿಯಂತ್ರಣವು ಎಲ್ಲಾ ಕಾರ್ಯಾಚರಣೆಗಳ ಮುಂದುವರಿಕೆಗೆ ನಿರ್ಣಾಯಕವಾಗಿದೆ. ಬ್ಲಾಕ್ಚೈನ್ ಮತ್ತು ಕೃತಕ ಬುದ್ಧಿಮತ್ತೆಯು ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳು ಮತ್ತು ದಾಸ್ತಾನುಗಳನ್ನು ಅನಗತ್ಯವಾಗಿ ಮಾಡಬಹುದು. ಅಂತಹ ವಾತಾವರಣದಲ್ಲಿ ಹೋರಾಡಲು ಸಾಧ್ಯವಾಗಬೇಕಾದರೆ ಮರುಕಲ್ಪನೆ, ಮರುಹೊಂದಾಣಿಕೆ ಮತ್ತು ಸುಧಾರಣೆಯ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ‘ಇಂಡಿಯನ್ ಏರ್ ಫೋರ್ಸ್ ಅಂಡ್ ಇಂಟಿಗ್ರೇಷನ್ ಆಫ್ ಆರ್ಮ್ಡ್ ಫೋರ್ಸ್’ ಎಂಬ ಪುಸ್ತಕವನ್ನು ವಾಯುಪಡೆ ಮುಖ್ಯಸ್ಥರು ಬಿಡುಗಡೆ ಮಾಡಿದರು. ಪ್ರತಿ ವರ್ಷ, ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ ಭಾರತೀಯ ವಾಯುಪಡೆಯ ಭದ್ರ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಂಗ್ ಕಮಾಂಡರ್ ಕೆಕೆ ಮಜುಂದಾರ್ ಅವರ ಸ್ಮರಣಾರ್ಥ ಸೆಮಿನಾರ್ ಆಯೋಜಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.