ವಯನಾಡ್: 2019 ರಲ್ಲಿ ಅಮೇಥಿಯ ಜನರು ಮಾಡಿದ್ದನ್ನು ಪುನರಾವರ್ತಿಸಲು ವಯನಾಡಿನ ಜನರು ಸಿದ್ಧರಾಗಿದ್ದಾರೆ ಎಂದು ಕೇರಳದ ವಯನಾಡು ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಕೆ ಸುರೇಂದ್ರನ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜನರು ಈ ಬಾರಿ ಸೋಲಿಸುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
“ವಯನಾಡಿನ ಜನರು ತಮ್ಮ ಸಂಸದರಾಗಿ ರಾಹುಲ್ ಗಾಂಧಿಯಿಂದ ಬೇಸತ್ತಿದ್ದಾರೆ” ಎಂದು ಹೇಳಿದ್ದಾರೆ.
ಮಂಗಳವಾರ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿದ ಸುರೇಂದ್ರನ್ ಅವರು. ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಕಾಂಗ್ರೆಸ್ ನಾಯಕರು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಪ್ರವಾಸ ಮಾಡುತ್ತಿರುತ್ತಾರೆ ಎಂದರು. ರಾಹುಲ್ “ಪ್ರವಾಸಿ ವೀಸಾ” ದಲ್ಲಿ ವಯನಾಡ್ನಲ್ಲಿ ಇದ್ದಾರೆ, ಆದರೆ ನಾನು ಶಾಶ್ವತ ವೀಸಾ ಹೊಂದಿರುವ ಸ್ಥಳೀಯ ನಿವಾಸಿಯಾಗಿದ್ದೇನೆ ಎಂದು ಹೇಳಿದ್ದಾರೆ.
2019 ರಲ್ಲಿ ರಾಹುಲ್ ಗಾಂಧಿ 64% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರೂ ಈ ಬಾರಿ ವಯನಾಡಿನಲ್ಲಿ ಬಿಜೆಪಿ ಗೆಲ್ಲುವ ಭರವಸೆ ಇದೆ ಎಂದಿದ್ದಾರೆ. “2109 ರಲ್ಲಿ ಜನರು ರಾಹುಲ್ ಅವರನ್ನು ಹೃದಯದಿಂದ ಸ್ವಾಗತಿಸಿದರು. ದೊಡ್ಡ ಮಟ್ಟದಲ್ಲಿ ಬೆಂಬಲಿಸಿದರು, ಆದರೆ, ದುರದೃಷ್ಟವಶಾತ್, ಏನೂ ಆಗಿಲ್ಲ, ರಾಹುಲ್ ವಯನಾಡಿಗೆ ಏನನ್ನೂ ಮಾಡಲಿಲ್ಲ, ಅವರು ವಯನಾಡಿಗೆ ಮೋಸ ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಆದರೆ ಕ್ಷೇತ್ರದ ಜನರು ರಾಹುಲ್ ಗಾಂಧಿಯಿಂದ ಸಂಪೂರ್ಣವಾಗಿ ನಿರಾಶೆಗೊಂಡಿದ್ದಾರೆ, ಬೇಸರಗೊಂಡಿದ್ದಾರೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.