ನವದೆಹಲಿ: ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಬೇಡಿಕೆಯನ್ನು ಪೂರೈಸುವಷ್ಟು ಈ ಅತ್ಯವಶ್ಯಕ ತರಕಾರಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಭಾರತ ಈಜಿಪ್ಟ್ನಿಂದ ಬರೋಬ್ಬರಿ 18 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ.
ಈಜಿಪ್ಟ್ನಿಂದ ಬಂದ ಕಡು ಕೆಂಪು ಬಣ್ಣದ ಈರುಳ್ಳಿಗಳು ಭಾರತದ ಮಾರುಕಟ್ಟೆಯಲ್ಲಿ ಸದ್ಯ ರಾರಾಜಿಸುತ್ತಿದೆ.
ಈ ವರ್ಷದ ಆಗಸ್ಟ್ ಮತ್ತು ಸೆಪ್ಟಂಬರ್ನಿಂದ ಈಜಿಪ್ಟ್ನಿಂದ 18 ಸಾವಿರ ಟನ್ಗಳಷ್ಟು ಈರುಳ್ಳಿಯನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ಈಜಿಪ್ಟಿಯನ್ ಕಾಂಪಿಟೆಂಟ್ ಅಥಾರಿಟಿ ತಿಳಿಸಿದೆ.
ಈ ವರ್ಷದ ಅಂತ್ಯದೊಳಗೆ ಆಮದು ಮಟ್ಟ 35 ಸಾವಿರ ಟನ್ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಿತ್ತಳೆ ಹಣ್ಣನ್ನೂ ಈಜಿಪ್ಟ್ನಿಂದ ಭಾರತ ಆಮದು ಮಾಡಿಕೊಳ್ಳತ್ತದೆ.
ಈರುಳ್ಳಿಯ ಬಿಕ್ಕಟ್ಟನ್ನು ನಿವಾರಿಸಲು ಭಾರತ ಅಫ್ಘಾನಿಸ್ಥಾನ ಮತ್ತು ಈಜಿಪ್ಟ್ನ್ನು ಅವಲಂಭಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.