ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ವೈಜ್ಞಾನಿಕವಾಗಿ ಮ್ಯಾಪ್ ಹಾಗೂ ಅಂಕಿ ಅಂಶಗಳ ಬಳಸಿಕೊಂಡು ಹೆದ್ದಾರಿಗಳ ಸ್ಥಿತಿ ಗತಿಗಳ ಬಗ್ಗೆ ನೈಜ ಸಮಯದಲ್ಲೇ (ರಿಯಲ್ ಟೈಮ್) ಟ್ರ್ಯಾಕ್ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಇದು ಇಸ್ರೋ ಹಾಗೂ ನೆಕ್ಟಾರ್ಗಳಿಂದಲೂ ಮಾಹಿತಿ ಪಡೆಯುತ್ತದೆ. ಇಸ್ರೋ ನೈಜ ವಿವರಗಳನ್ನು ಪಡೆಯಲು ಉಪಗ್ರಹ ಚಿತ್ರಣಗಳನ್ನು ಬಳಸುತ್ತಿದ್ದರೆ, ನೆಕ್ಟಾರ್ ಡ್ರೋನ್ ಬಳಸುತ್ತದೆ.
ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಕೇಂದ್ರ ನಿಗಾ ಸೆಲ್ ಹಾಗೂ ಕಾಲ್ ಸೆಂಟರ್ಗಳನ್ನು ಹೊಂದಲಿದೆ. ಇಸ್ರೋ ಹಾಗೂ ನೆಕ್ಟಾರ್ ಸಂಸ್ಥೆಗಳೊಂದಿಗೆ ಎನ್ಎಚ್ಎಐ ಒಪ್ಪಂದ ಮಾಡಲಿದ್ದು, ಉಪಗ್ರಹ ಮತ್ತು ಡ್ರೋನ್ ಸಹಾಯದಿಂದ ಮಾಹಿತಿಗಳನ್ನು ಪಡೆದು ಕಾರ್ಯಾಚರಣೆ ನಡೆಸಲಿದೆ ಎಂದು ಎನ್ಎಚ್ಎಐ ಅಧ್ಯಕ್ಷ ರಾಘವ್ ಚಂದ್ರ ತಿಳಿಸಿದ್ದಾರೆ.
ಕಾಲ್ ಸೆಂಟರ್ಗಳ ಮೂಲಕ ಜನರ ದೂರುಗಳನ್ನು ಪಡೆದು, ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಧಿಕಾರಿಗಳು ದುರಸ್ತಿಗೊಳಿಸಿದ ರಸ್ತೆಗಳ ಚಿತ್ರಗಳನ್ನು ಕಳುಹಿಸಬೇಕಾಗಿದ್ದು, ಡ್ರೋನ್ ಸಹಾಯದಿಂದ ಮರು ಪರಿಶೀಲಿಸಲಾಗುವುದೆಂದು ಚಂದ್ರ ವಿವರಿಸಿದ್ದಾರೆ.
ಈಗಾಗಲೇ ಎನ್ಎಚ್ಎಐ 3000 ಕಿ.ಮೀ. ರಸ್ತೆಯ ನಕ್ಷೆ ತಯಾರಿಸಲಾಗಿದ್ದು, ರಸ್ತೆ ನಿರ್ವಹಣೆ ವ್ಯವಸ್ಥೆ (ರ್ಯಾಮ್ಸ್) ರಸ್ತೆಗಳ ಗುಣಮಟ್ಟ, ಒತ್ತುವರಿ ಮತ್ತಿತರ ವಿವರಗಳನ್ನು ಸೆರೆಹಿಡಿಯಯುತ್ತದೆ. ಹೆದ್ದಾರಿಗಳ ನೆಟ್ವರ್ಕ್ ಮಾಲ್ಯಮಾಪನ ಮಾಡಲಾಗುವುದು. ರ್ಯಾಮ್ಸ್ 360 ಡಿಗ್ರಿ ನಕ್ಷೆ ತಯಾರಿಸಲು ಗಗನ್ ಹಾಗೂ ಭುವನ್ ಉಪಗ್ರಹವನ್ನು ಬಳಸಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.