ಶೃಂಗೇರಿ: ಮಾರ್ಚ್ 19ರಂದು ಮಂಗಳವಾರ ಮಂಥನ ಶೃಂಗೇರಿಯ ವತಿಯಿಂದ ‘ದೇವಾಲಯಗಳ ಸಂರಕ್ಷಣೆ: ನಮ್ಮ ಮುಂದಿರುವ ಸವಾಲುಗಳು’ ಎಂಬ ವಿಷಯದ ಕುರಿತು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ್ ಅವರು ಉಪನ್ಯಾಸ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ” ದೇವಸ್ಥಾನ ನಮ್ಮ ಶ್ರದ್ಧಾ ಕೇಂದ್ರಗಳು, ಅಂದಿನಿಂದ ಇಂದಿನವರೆಗೂ ನಮ್ಮ ದೇವಸ್ಥಾನಗಳು ಪ್ರಮುಖವಾಗಿ 3 ಸವಾಲುಗಳನ್ನು ಎದುರಿಸುತ್ತಿವೆ. ಅದೆಂದರೆ ಅನ್ಯ ಧರ್ಮಿಯರ ಆಕ್ರಮಣ, ಸರ್ಕಾರದ ಹಸ್ತಕ್ಷೇಪ
ಮತ್ತಯ ಈಗಿನ ಪೀಳಿಗೆಗೆ ಕಡಿಮೆಯಾಗುತ್ತಿರುವ ಶ್ರದ್ಧೆ. ಸಾವಿರಾರು ವರ್ಷಗಳಿಂದಲೂ ಕೂಡ ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ನಡೆದುಕೊಂಡೆ ಬಂದಿದೆ, ದೇವಸ್ಥಾನದ ನಾಶದ ಮೂಲಕ ಹಿಂದುಗಳ ಹತ್ತಿಕ್ಕುವ ಪ್ರಯತ್ನ ನಡೆದಿದೆ” ಎಂದಿದ್ದಾರೆ.
ಸರ್ಕಾರ ನಿರಂತರವಾಗಿ ದೇವಾಲಯಗಳ ಬಗ್ಗೆ ಹಸ್ತಕ್ಷೇಪ ಮಾಡುವ ಮೂಲಕ ನಮ್ಮ ಕಾಣಿಕೆಯ ಹಣವನ್ನು ನಮ್ಮ ನಮ್ಮ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಆ ಮೂಲಕ ಸಾಮಾಜಿಕ ಕಾರ್ಯಕ್ಕೆ ಬಳಸಲು ಬಿಡದೆ ಬೇರೆ ಯಾವುದೋ ಕಾರ್ಯಕ್ಕೆ ಬಳಸುತ್ತಿದೆ. ಈಗಿನ ಪೀಳಿಗೆ ನಮ್ಮ ಶ್ರದ್ದಾ ಕೇಂದ್ರಗಳ ಮೇಲೆ ಶ್ರದ್ಧೆ ಮತ್ತು ಭಕ್ತಿ ಕಡಿಮೆ ಆಗುತ್ತಿರುವುದು ಕೂಡ ಪ್ರಮುಖವಾದ ಸವಾಲು ಎಂದರು.
ನಿರಂತರ ಜಾಗೃತಿಯ ಮೂಲಕ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯ, ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಇಲ್ಲದ ಭೇದಗಳು ಊರಿನ ಸಣ್ಣ ದೇವಸ್ಥಾನಗಳಲ್ಲಿ ಕಾಣುತ್ತೇವೆ ಹಾಗಾಗಿ ಸಾಮರಸ್ಯದ ಮೂಲಕ ಕೂಡ ಈ ಸವಾಲುಗಳನ್ನು ಎದುರಿಸಬಹುದು, ಒಂದು ಕಾಲದಲ್ಲಿ ಶೈಕ್ಷಣಿಕ ಆರ್ಥಿಕ ಕೇಂದ್ರಗಳಾದ ನಮ್ಮ ದೇವಸ್ಥಾನಗಳು ಮುಂದೆಯೂ ಹಾಗೆಯೇ ಉಳಿಯಲು ನಮ್ಮ ಪಾತ್ರ ದೊಡ್ಡದು ಎಂದರು.
ಇತ್ತೀಚಿಗೆ ಪ್ರಾಣ ಪ್ರತಿಷ್ಠಾಪನೆಗೊಂಡ ಅಯೋಧ್ಯೆಯ ಶ್ರೀ ರಾಮಮಂದಿರ ಸಾವಿರಾರು ವರ್ಷಗಳು ಉಳಿಯಲು ಕೇವಲ engineering work ಮಾತ್ರ ಸಾಕಾಗುವುದಿಲ್ಲ ಬದಲಾಗಿ ನಾವು ನಾವಾಗಿ ಅಂದರೆ ಹಿಂದುಗಳಾಗಿ ಉಳಿದು ಈ ಎಲ್ಲಾ ಸವಾಲುಗಳನ್ನು ಎದುರಿಸಿದರೆ ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮುರಳಿಕೃಷ್ಣ ಭಟ್ ವೈಕುಂಠಪುರ, ಅನೇಕ ದೇವಸ್ಥಾಗಳ ಧರ್ಮದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಪುರೋಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೃಷಿಕರಾದ ದಿವೀರ ಮಲ್ನಾಡ್, ಸಾಮಾಜಿಕ ಕಾರ್ಯಕರ್ತರಾದ ರಾಜಗೋಪಲ್ ಹಾಗೂ ಮಂಥನ ತಂಡದ ಅನಿರುದ್ಧ ಕೊರಡಕಲ್ಲು, ಅಭಿರಾಮ್, ಲೇಖಕಿ ಮತ್ತು ಆಯುರ್ವೇದ ವೈದ್ಯರಾದ ಡಾ. ಲಕ್ಷೀ ನರಸಿಂಹ ಪ್ರಸಾದ್, ಅಲೇಖಕಿ ಶುಭಶ್ರೀ ಭಟ್ ಅವರು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.