ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ಥಾನ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗೆಗಿನ ವಿಡಿಯೋ ಇತ್ತೀಚಿಗೆ ಬಹಿರಂಗಗೊಂಡು ಭಾರೀ ಸುದ್ದಿ ಮಾಡಿತ್ತು. ಇದರಿಂದಾಗಿ ಆ ದೇಶದ ನಿಜಬಣ್ಣ ಜಗತ್ತಿಗೆ ತಿಳಿಯುವಂತಾಯಿತು.
ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುವ ಭಾರತ, ‘ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲಿನ ಸೇನೆ ಮತ್ತು ಐಎಸ್ಐ ಹಾಕಿದ ಪರದೆ ಸರಿದಿದೆ, ಪಾಕಿಸ್ಥಾನ ಆಕ್ರಮಣದ ನೈಜ ಮತ್ತು ಭಯಾನಕ ಪರಿಣಾಮಗಳನ್ನು ಜಗತ್ತು ಈಗ ನೋಡಬಹುದು’ ಎಂದಿದೆ.
ಈ ವಿಡಿಯೋದಲ್ಲಿ ದೃಶ್ಯಗಳು ನಕಲಿಯಾಗಿದ್ದು, ಇದು ಭಾರತದ ಮಾಧ್ಯಮಗಳು ಮಾಡುತ್ತಿರುವ ಸುಳ್ಳು ಪ್ರಚಾರ ಎಂದಿರುವ ಪಾಕಿಸ್ಥಾನದ ಆರೋಪವನ್ನು ತಳ್ಳಿ ಹಾಕಿರುವ ಭಾರತೀಯ ಅಧಿಕಾರಿಗಳು, ಭಾರತದ ವಿರುದ್ಧ ಆರೋಪ ಮಾಡುವುದು ಪಾಕಿಸ್ಥಾನದ ಅಭ್ಯಾಸ. ಕ್ಯಾಮೆರಾಗಳು ಎಂದೂ ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ.
ಭಾರತದ ಕಾಶ್ಮೀರದ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡುವ ಪಾಕಿಸ್ಥಾನ ತಾನು ಆಕ್ರಮಿಸಿ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿದುಕೊಂಡರೆ ಒಳ್ಳೆಯದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.