ನವದೆಹಲಿ: ಮಹಿಳೆಯರಿಗೆ ಆಪತ್ತಿನ ಸಂದರ್ಭದಲ್ಲಿ ರಕ್ಷಣೆಗೆ ಸಹಕಾರಿಯಾಗುವಂತೆ ಮೊಬೈಲ್ಗಳಲ್ಲಿ ’ಪ್ಯಾನಿಕ್ ಬಟನ್’ (ತುರ್ತು ಸಂದರ್ಭಗಳಲ್ಲಿ ಬಳಸುವ ಬಟನ್) ಅಳವಡಿಸುವ ಬಗ್ಗೆ ಸರ್ಕಾರ ಚಿಂತಿಸಿದೆ.
ಮಹಿಳೆಯರ ರಕ್ಷಣೆ ಬಗ್ಗೆ ಒತ್ತು ನೀಡಲು ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು, ಪ್ಯಾನಿಕ್ ಬಟನ್ ಅಳವಡಿಕೆ ಕುರಿತು ಕಾರ್ಯಪ್ರವೃತ್ತರಾಗುವಂತೆ ಎಲ್ಲಾ ಮೊಬೈಲ್ ಉತ್ಪಾದಕರನ್ನು ಕೋರಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕ ಗಾಂಧಿ ತಿಳಿಸಿದ್ದಾರೆ.
ಮೊಬೈಲ್ ಫೋನ್ಗಳಲ್ಲಿ ತುರ್ತು ಬಟನ್ ಅಳವಡಿಸುವ ಬಗ್ಗೆ ಉತ್ಪಾದಕರೊಂದಿಗೆ ಮಾತುಕತೆ ನಡೆಸಿದ್ದು ಇನ್ನು ಕೆಲವೇ ತಿಂಗಳಿನಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
ತುರ್ತು ಸಹಾಯಕ್ಕೆ ಹಲವು ಆ್ಯಪ್ಗಳು ಲಭ್ಯವಿದ್ದರೂ ಎಲ್ಲಾ ಸಂದರ್ಭಗಳಲ್ಲಿ ಇದನ್ನು ಬಳಸುವುದು ಕಷ್ಟ. ಆದ್ದರಿಂದ ಪ್ಯಾನಿಕ್ ಬಟನ್ ಅಳವಡಿಸಲಾಗುವುದು. ಈ ಬಟನ್ ಒತ್ತಿದೊಡನೆ ಪೂರ್ವನಿಗದಿತ ಸಹಾಯವಾಣಿ ನಂಬರ್ಗಳಿಗೆ ಎಸ್ಎಂಎಸ್ ರವಾನೆಯಾಗುತ್ತದೆ. ಅಲ್ಲದೇ ತುರ್ತು ಜಿಪಿಎಸ್ ಮೂಲಕ ಸ್ಥಳದ ಮಾಹಿತಿಯೂ ದೊರಕುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.