ನವದೆಹಲಿ: ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ, ತಲಬಿರ-2 ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಲ್ಕೋ ಕಂಪನಿಗೆ ನೀಡುವಂತೆ ನಾನು ಶಿಫಾರಸ್ಸು ಮಾಡಲೂ ಇಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
ಒರಿಸ್ಸಾದಲ್ಲಿರುವ ಹಿಂಡಲ್ಕೋ ಕಂಪನಿಗೆ ಕಲ್ಲಿದ್ದಲು ನಿಕ್ಷೇಪ ನೀಡುವ ಬಗ್ಗೆ ಕುಮಾರ ಮಂಗಳಮ್ ಬಿರ್ಲಾ ಅವರಿಗೆ ನಾನು ಯಾವುದೇ ಭರವಸೆ ಅಥವಾ ವಾಗ್ದಾನವನ್ನು ನೀಡಿರಲಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐಗೆ ಸಿಂಗ್ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾನು ಕೇವಲ ಬಿರ್ಲಾ ಮತ್ತು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪತ್ರವನ್ನು ಪರಿಶೀಲನೆಗಾಗಿ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರ ಮಾಡಿದ್ದೆ, ಸಚಿವಾಲಯ ಶಿಫಾರಸ್ಸು ಮಾಡಿದ್ದ ಅಂಶಗಳನ್ನು ಅನಮೋದಿಸಿದ್ದೇನಷ್ಟೇ ಎಂದಿದ್ದಾರೆ.
2005ರಲ್ಲಿ ಕಲ್ಲಿದ್ದಲು ಸಚಿವಾಲಯ ಸಿಂಗ್ ಅವರ ಬಳಿ ಇತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.