ನವದೆಹಲಿ: ಛತ್ತೀಸ್ಗಢದಲ್ಲಿ ಸುಮಾರು 63,000 ಕ್ಕೂ ಹೆಚ್ಚು ವಿದೇಶಿ ವಲಸಿಗರು, ಮುಖ್ಯವಾಗಿ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದಿಂದ ಬಂದ ಹಿಂದೂ, ಸಿಖ್ಖರು ನೆಲೆಸಿದ್ದು, ಇವರೆಲ್ಲರೂ ಕೇಂದ್ರದ ಸಿಎಎ ಕಾನೂನಿನಿಂದ ಪ್ರಯೋಜನವನ್ನು ಪಡೆಯಲಿದ್ದಾರೆ.
ಛತ್ತೀಸ್ಗಢದ ವಿವಿಧ ಭಾಗಗಳಲ್ಲಿ ನಿರಾಶ್ರಿತರು ವಾಸಿಸುತ್ತಿದ್ದಾರೆ, ಮೋದಿ ಸರ್ಕಾರದ ನಿರ್ಧಾರದಿಂದಾಗಿ ಇವರು ಪ್ರಯೋಜನ ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ
ಗೃಹ ವ್ಯವಹಾರಗಳ ಇಲಾಖೆಯ ದಾಖಲೆಗಳ ಪ್ರಕಾರ, ಪ್ರಸ್ತುತ 62,890 ವಿದೇಶಿಗರು ಭಾರತೀಯ ಪೌರತ್ವವಿಲ್ಲದೆ ಛತ್ತೀಸ್ಗಢ ರಾಜ್ಯದಲ್ಲಿ ನೆಲೆಸಿದ್ದಾರೆ.
ನಿರಾಶ್ರಿತರ ಅನುಮತಿಯಡಿ ಐದು ದಶಕಗಳಿಂದ ಛತ್ತೀಸ್ಗಢದಲ್ಲಿ ನೆಲೆಸಿದ್ದಾರೆ
ಈ ಅಕ್ರಮ ವಿದೇಶಿಯರಲ್ಲಿಹೆಚ್ಚಿನವರು 2014 ರ ಮೊದಲು ಭಾರತಕ್ಕೆ ಬಂದವರು. ಈ ನಿರಾಶ್ರಿತರಲ್ಲಿ ಕೆಲವರು ನಿರಾಶ್ರಿತರ ನಿವಾಸ ಪರವಾನಗಿಯಲ್ಲಿ 50-60 ವರ್ಷಗಳಿಗೂ ಹೆಚ್ಚು ಕಾಲ ಛತ್ತೀಸ್ಗಢದಲ್ಲಿ ನೆಲೆಸಿದ್ದಾರೆ, ಇನ್ನೂ ಪೌರತ್ವದ ಹಕ್ಕಿಲ್ಲದೆ ಪರದಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.