ಬೆಂಗಳೂರು: ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.
ರಾಡಮೈನ್-ಬಿ ಮತ್ತು ಕಾರ್ಮೋಸಿನ್ನಂತಹ ಬಣ್ಣದ ಬಳಕೆಯು ಹಾನಿಕಾರಕ ಮತ್ತು ಅಸುರಕ್ಷಿತವಾಗಿದ್ದು, ಕೃತಕ ಬಣ್ಣಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ತಿನ್ನಬಾರದು ಎಂದು ರಾಜ್ಯ ಸರ್ಕಾರ ಸಾರ್ವಜನಿಕರನ್ನು ಒತ್ತಾಯಿಸಿದೆ.
ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿ ತಯಾರಿಸುವಾಗ ಕೃತಕ ಬಣ್ಣಗಳನ್ನು ಬಳಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ, ಅಪರಾಧಕ್ಕೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 10 ಲಕ್ಷ ದಂಡ ವಿಧಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿ ಮಾದರಿಯಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ತಯಾರಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. “ರಾಜ್ಯದಾದ್ಯಂತದ ತಿನಿಸುಗಳಿಂದ ಸಂಗ್ರಹಿಸಲಾದ 171 ಮಾದರಿಗಳಲ್ಲಿ 107 ಅಸುರಕ್ಷಿತ ರಾಸಾಯನಿಕಗಳಾದ ಟಾರ್ಟ್ರಾಜಿನ್, ಸನ್ಸೆಟ್ ಯೆಲ್ಲೋ, ರೋಡಮೈನ್-ಬಿ ಮತ್ತು ಕಾರ್ಮೋಸಿನ್ ಬಳಸಿ ತಯಾರಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.