ಚೆನ್ನೈ: ಸಿನಿಮಾದಲ್ಲಿ ದೊಡ್ಡ ದೊಡ್ಡ ಡೈಲಾಗ್ ಬಿಟ್ಟು ಜನರಿಂದ ಚಪ್ಪಾಳೆ ಗಿಟ್ಟಿಸುವ ನಟರು ನಿಜ ಜೀವನದಲ್ಲಿ ಮಾತ್ರ ಕರ್ತವ್ಯ ಪಾಲಿಸಿ ಆದರ್ಶ ಮರೆಯುವಲ್ಲಿ ವಿಫಲರಾಗುತ್ತಾರೆ.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಮತ್ತು ಗುರುವಾರ ದಾಳಿ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ವಿಜಯ್ ಅವರು ಕಳೆದ ಐದು ವರ್ಷದಿಂದ ಸಂಪೂರ್ಣ ತೆರಿಗೆ ಕಟ್ಟಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಪುಲಿ ಚಿತ್ರದ ನಟರುಗಳಾದ ವಿಜಯ್, ಸಮಂತಾ ರುತು ಪ್ರಭು, ನಯನತಾರಾ, ನಿರ್ಮಾಪಕ ಪಿ.ಟಿ.ಸೆಲ್ವ ಕುಮಾರ್, ಶಿಬು ಟಮೀನ್ಸ್, ಫಿನಾನ್ಸಿಯರ್ ರಮೇಶ್ ಅವರುಗಳ ಮನೆಗೆ ಆದಾಐ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಜಯ್ ಸೇರಿದಂತೆ ಈ ಎಲ್ಲರೂ ತೆರಿಗೆ ಕಟ್ಟುತ್ತಿದ್ದಾರೆ, ಆದರೆ ಸಂಪೂರ್ಣ ತೆರಿಗೆಯನ್ನು ಪಾವತಿಸಿಲ್ಲ. ಒಟ್ಟು 25 ಕೋಟಿ ರೂಪಾಯಿಯಷ್ಟು ತೆರಿಗೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ನಡೆಸಿದ ದಾಳಿಯಿಂದ 2 ಕೋಟಿ ರೂಪಾಯಿ ಹಣ ಮತ್ತು 2 ಕೋಟಿ ಮೌಲ್ಯದ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ನಟಿಯರು ಕಳೆದ ಎರಡು ವರ್ಷದಿಂದ ಪೂರ್ಣ ತೆರಿಗೆಯನ್ನು ಪಾವತಿಸಿಲ್ಲ. ವಿಜಯ್ ಐದು ವರ್ಷದಿಂದ ಪೂರ್ಣ ತೆರಿಗೆ ಪಾವತಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈ, ಕೊಚ್ಚಿನ್, ಹೈದರಾಬಾದ್ ಸೇರಿದಂತೆ ಒಟ್ಟು 30 ಜಾಗಗಳಲ್ಲಿ ದಾಳಿಗಳನ್ನು ನಡೆಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.