ಅಜ್ಮೀರ್: 1993ರ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಅಬ್ದುಲ್ ಕರೀಂ ತುಂಡಾನನ್ನು ರಾಜಸ್ಥಾನದ ವಿಶೇಷ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ. 1992 ರ ಬಾಬರಿ ಮಸೀದಿ ಧ್ವಂಸದ ಮೊದಲ ವಾರ್ಷಿಕೋತ್ಸವದಂದು ಅನೇಕ ರೈಲುಗಳಲ್ಲಿ ನಡೆದ ಸ್ಫೋಟಗಳಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.
ತುಂಡಾ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಆತನನ್ನು ದೋಷಮುಕ್ತಗೊಳಿಸಿದೆ. ಇಬ್ಬರು ಇತರ ಆರೋಪಿಗಳಾದ ಅಮಿನುದ್ದೀನ್ ಮತ್ತು ಇರ್ಫಾನ್ ಅವರನ್ನು ದೋಷಿಗಳೆಂದು ಘೋಷಿಸಿತು ಮತ್ತು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈಗ 80 ವರ್ಷದ ತುಂಡಾ 1996ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಯ ನಂತರ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಭಯೋತ್ಪಾದಕ ದಾವೂದ್ ಇಬ್ರಾಹಿಂನ ನಿಕಟವರ್ತಿ ಎಂದು ಕರೆಯಲ್ಪಡುವ ಈತನನ್ನು ಬಾಂಬ್ ತಯಾರಿಕೆಯ ಕೌಶಲ್ಯಕ್ಕಾಗಿ “ಡಾ ಬಾಂಬ್” ಎಂದು ಕರೆಯಲಾಗುತ್ತದೆ.
ಕೋಟಾ, ಕಾನ್ಪುರ, ಸಿಕಂದರಾಬಾದ್ ಮತ್ತು ಸೂರತ್ ಮೂಲಕ ಹಾದುಹೋಗುವ ರೈಲುಗಳಲ್ಲಿ ಸ್ಫೋಟಗಳನ್ನು ನಡೆಸಲಾಗಿತ್ತು. ಬಾಂಬೆ ಸ್ಫೋಟದ ತಿಂಗಳ ನಂತರ, ರೈಲು ಬಾಂಬ್ ಸ್ಫೋಟಗಳು ದೇಶವನ್ನು ಬೆಚ್ಚಿಬೀಳಿಸಿದ್ದವು. ದೂರದ ನಗರಗಳ ಎಲ್ಲಾ ಪ್ರಕರಣಗಳನ್ನು ವಿಶೇಷ ನ್ಯಾಯಾಲಯವು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಒಟ್ಟುಗೂಡಿಸಿ ವಿಚಾರಣೆ ನಡೆಸಿತು. ಕೇಂದ್ರೀಯ ಸಂಸ್ಥೆ ಸಿಬಿಐ ತನಿಖೆಯ ಉಸ್ತುವಾರಿ ವಹಿಸಿತ್ತು.
ತುಂಡಾ ಖುಲಾಸೆಯನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ನ ಮೊರೆ ಹೋಗಬಹುದು ಎಂದು ತಿಳಿದುಬಂದಿದೆ.
ತುಂಡಾ, ತನ್ನ 40 ನೇ ವಯಸ್ಸಿನಲ್ಲಿ ಭಯೋತ್ಪಾದಕನಾಗಿ ಬದಲಾಗುವ ಮೊದಲು ಬಡಗಿಯಾಗಿ ವೃತ್ತಿ ಪ್ರಾರಂಭಿಸಿದ್ದಾರೆ. 1993 ರ ಮುಂಬೈ ಸ್ಫೋಟದ ನಂತರ ಅವನು ಭದ್ರತಾ ಪಡೆಗಳ ಕಣ್ಗಾವಲಿನಡಿ ಬಂದಿದ್ದಾನೆ. ಬಾಂಬ್ ತಯಾರಿಕೆಯ ವೇಳೆ ನಡೆದ ಸ್ಫೋಟದಲ್ಲಿ ಎಡಗೈಯನ್ನು ಕಳೆದುಕೊಂಡಿದ್ದಾನೆ. ಅವರು ಲಷ್ಕರ್-ಎ-ತೊಯ್ಬಾ, ಇಂಡಿಯನ್ ಮುಜಾಹಿದ್ದೀನ್, ಜೈಶ್-ಎ-ಮೊಹಮ್ಮದ್ ಮತ್ತು ಬಬ್ಬರ್ ಖಾಲ್ಸಾ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾನೆ.
2013 ರಲ್ಲಿ, ಭಾರತ-ನೇಪಾಳ ಗಡಿಯ ಸಮೀಪವಿರುವ ಉತ್ತರಾಖಂಡದ ಬನ್ಬಾಸಾದಲ್ಲಿ ಅವನನ್ನು ಬಂಧಿಸಲಾಯಿತು. ನಾಲ್ಕು ವರ್ಷಗಳ ನಂತರ, ಹರಿಯಾಣ ನ್ಯಾಯಾಲಯವು 1996 ರ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.