ಬೆಂಗಳೂರು: 15ನೇ ಆವೃತ್ತಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಗುರುವಾರದಿಂದ ಆರಂಭವಾಗಲಿದೆ. ಬೆಂಗಳೂರು ಇಂಟರ್ನ್ಯಾಶನಲ್ನ 15ನೇ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ನಾಳೆ ವಿಧಾನಸೌಧದ ಮುಂಭಾಗದಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.
ಚಾಮರಾಜಪೇಟೆಯ ರಾಜ್ ಕುಮಾರ್ ಕಲಾ ಭವನ, ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ, ಒರಾಯನ್ ಮಾಲ್, ಡಾ ರಾಜ್ಕುಮಾರ್ ಭವನ, ಸುಚಿತಾ ಅಕಡಾಮಿಯ 11 ಪರದೆಗಳಲ್ಲಿ ಸುಮಾರು 50 ದೇಶಗಳ 180 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಲನಚಿತ್ರೋತ್ಸವವು ಕನ್ನಡ ಚಲನಚಿತ್ರೋದ್ಯಮದ 90 ನೇ ವರ್ಷವನ್ನು ಮತ್ತು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣಗೊಳಿಸಿದ 50 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ನಾಳೆ ತೆರೆ ಕಾಣಲಿರುವ ಕನ್ನಡ ಚಲನಚಿತ್ರಗಳೆಂದರೆ- ಅಮರಶಿಲ್ಪಿ ಜಕಣಾಚಾರಿ, ಬೆಳ್ಳಿ ಮೋಡ, ಒಂದನೊಂದು ಕಾಲದಲ್ಲಿ, ಅಂತ, ಮಯೂರ, ತಾಯಿ ಸಾಹೇಬ, ಕಾಟೇರ, ಟಗರು ಪಾಳ್ಯ, ಕೌಸಲ್ಯ ಸುಪ್ರಜಾ ರಾಮ, ಸಪ್ತ ಸಾಗರದಾಚೆ, ಇತ್ಯಾದಿ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಂಗಾಳಿ ನಿರ್ದೇಶಕ ಮೃಣಾಲ್ ಸೇನ್ ಅವರ ಚಲನಚಿತ್ರಗಳು ಮತ್ತು ಇರಾನ್ನ ಚಲನಚಿತ್ರ ನಿರ್ಮಾಪಕ ಅಬ್ಬಾಸ್ ಕಿಯಾರೊಸ್ತಮಿ ಅವರ ಚಲನಚಿತ್ರಗಳು ಸಹ ಪ್ರದರ್ಶನಗೊಳ್ಳಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.