ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನಲ್ಲಿ ಸುಮಾರು 17,300 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯವು ಪ್ರಗತಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಮತ್ತು ಕೇಂದ್ರ ಸರ್ಕಾರದ ಪ್ರಯತ್ನಗಳಿಂದ ತಮಿಳುನಾಡಿನಲ್ಲಿ ಆಧುನಿಕ ಸಂಪರ್ಕವು ಹೊಸ ಎತ್ತರದಲ್ಲಿದೆ ಎಂದು ಹೇಳಿದರು.
ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಜಲಮಾರ್ಗ ನೌಕೆಯನ್ನು ಇಲ್ಲಿ ಬಿಡುಗಡೆ ಮಾಡಿದ ಮೋದಿ, ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದ ಹೆಚ್ಚುತ್ತಿರುವ ಸಂಪರ್ಕವು ತಮಿಳುನಾಡಿನಲ್ಲಿ ‘ಜೀವನದ ಸುಲಭತೆಯನ್ನು’ ಹೆಚ್ಚಿಸಿದೆ ಎಂದು ಹೇಳಿದರು. ಸಮುದ್ರ ವಲಯದ ಅಭಿವೃದ್ಧಿ ಎಂದರೆ ತಮಿಳುನಾಡಿನಂತಹ ರಾಜ್ಯದ ಅಭಿವೃದ್ಧಿಯೇ ಆಗಿದೆ ಎಂದರು.
ಹೊಸ ಯೋಜನೆಗಳು ಅಭಿವೃದ್ಧಿ ಹೊಂದಿದ ಭಾರತದ ಮಾರ್ಗಸೂಚಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.
”ನಾನು ಏನು ಹೇಳುತ್ತಿದ್ದೇನೋ ಅದು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಅಥವಾ ನನ್ನ ಸ್ವಂತ ಸಿದ್ಧಾಂತಕ್ಕೆ ಸೇರಿಲ್ಲ, ಅದು ಅಭಿವೃದ್ಧಿಗೆ ಮಾತ್ರ ಸೇರಿದೆ. ತಮಿಳುನಾಡು ಮತ್ತು ದೇಶದ ಇತರ ಜನರಿಗೆ ಸತ್ಯವನ್ನು ಹೇಳಿ. ಸತ್ಯ ಕಹಿ ಆದರೆ ಹೇಳಲೇ ಬೇಕು. ನಾನು ತಂದ ಈ ಎಲ್ಲಾ ಯೋಜನೆಗಳು ಸ್ಥಳೀಯರ ದಶಕಗಳ ಬೇಡಿಕೆಯಾಗಿತ್ತು” ಎಂದು ಪರೋಕ್ಷವಾಗಿ ಡಿಎಂಕೆಯನ್ನು ಉಲ್ಲೇಖಿಸಿ ಮೋದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಡಿಎಂಕೆ ನಾಯಕರು ವೇದಿಕೆಯಲ್ಲೇ ಇದ್ದರು.
”ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ 1,300 ಕಿ.ಮೀ.ನಷ್ಟು ರೈಲು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಇದೇ ಅವಧಿಯಲ್ಲಿ 2,000 ಕಿಮೀ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನೂರಾರು ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ರೈಲು ನಿಲ್ದಾಣಗಳಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳನ್ನು ಖಾತ್ರಿಪಡಿಸಲಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.