ನವದೆಹಲಿ: ನಟ ರಣದೀಪ್ ಹೂಡಾ ಅವರು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಪುಣ್ಯತಿಥಿಯಂದು ವಿಶೇಷ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಣದೀಪ್ ಹೂಡಾ ಅವರಯ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಸೆಟ್ಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಾವರ್ಕರ್ ಜೀವನಚರಿತ್ರೆಯ ಚಿತ್ರೀಕರಣದ ಸಮಯದಲ್ಲಿ ಏನು ಅನುಭವಿಸಿದರು ಎಂಬುದನ್ನು ಅನುಭವಿಸಲು ಅವರು ಜೈಲಿನ ಕೊಠಡಿಯೊಳಗೆ ಹೇಗೆ ಬೀಗ ಹಾಕಿ ಕುಳಿತುಕೊಂಡರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಫೋಟೋಗಳನ್ನು ಹಂಚಿಕೊಂಡಿರುವ ಅವರು, “ಇಂದು ಭಾರತ ಮಾತೆಯ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ನಾಯಕ, ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ, ತತ್ವಜ್ಞಾನಿ ಮತ್ತು ದಾರ್ಶನಿಕ, ಸ್ವಾತಂತ್ರ್ತ ವೀರ ಸಾವರ್ಕರ್ ಅವರ ಪುಣ್ಯತಿಥಿ. ಅವರ ಅಗಾಧ ಬುದ್ಧಿಶಕ್ತಿ ಮತ್ತು ಉಗ್ರ ಧೈರ್ಯದಿಂದ ಬ್ರಿಟಿಷರನ್ನು ತುಂಬಾ ಹೆದರಿಸಿದ ವ್ಯಕ್ತಿ. ಬ್ರಿಟಿಷರು ಅವರನ್ನು ಎರಡು 50 ವರ್ಷಗಳ ಕಾಲ ಕಾಲಾಪಾನಿಯಲ್ಲಿನ 7 ರಿಂದ 11 ಅಡಿ ಅಗಲದ ಜೈಲಿನಲ್ಲಿ ಬಂಧಿಸಿದರು. ಅವರ ಜೀವನಚರಿತ್ರೆ ಸಿನಿಮಾ ನಿರ್ಮಾಣದ ಸಮಯದಲ್ಲಿ ನಾನು ಈ ಸೆಲ್ನೊಳಗೆ ನನ್ನನ್ನು ಲಾಕ್ ಮಾಡಲು ಪ್ರಯತ್ನಿಸಿದೆ, ಅವರು ಏನನ್ನು ಅನುಭವಿಸಿದ್ದರೆಂಬುದನ್ನು ಕಂಡುಕೊಂಡೆ ಭಾವಿಸುತ್ತೇನೆ” ಎಂದಿದ್ದಾರೆ.
ಮಾರ್ಚ್ 22, 2024 ರಂದು ಚಿತ್ರವು ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ ಎಂದು ರಂದೀಪ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.