ಚೆನ್ನೈ: ತಮಿಳು ಮಾನಿಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿ ಎದುರಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಜಿ ಕೆ ವಾಸನ್ ಹೇಳಿದ್ದಾರೆ. ಫೆಬ್ರವರಿ 27 ರಂದು ತಿರುಪುರ್ ಜಿಲ್ಲೆಯ ಪಲ್ಲಡಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಎನ್ಡಿಎ ಭಾಗವಾಗಿ ತಮಿಳು ಮಾಣಿಲ ಕಾಂಗ್ರೆಸ್ ಮುಂಬರುವ ಚುನಾವಣೆಯನ್ನು ಬಿಜೆಪಿ ನಾಯಕತ್ವದಲ್ಲಿ ಎದುರಿಸಲಿದೆ ಎಂದು ವಾಸನ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗಾಗಿ ತಮಿಳುನಾಡಿನಲ್ಲಿ ಪಕ್ಷವನ್ನು ಹುಡುಕುತ್ತಿದ್ದ ಬಿಜೆಪಿಗೆ ದೊಡ್ಡ ನಿರಾಳತೆ ಒದಗಿಸಿದೆ.
2021 ರ ಅಸೆಂಬ್ಲಿ ಚುನಾವಣೆಯನ್ನು ಎನ್ಡಿಎ ಒಕ್ಕೂಟದ ಭಾಗವಾಗಿ ಎದುರಿಸಿದದ್ದ ತಮಿಳುನಾಡಿನ ಎಐಎಡಿಎಂಕೆ ಈಗ ಬಿಜೆಪಿ ಜೊತೆಗಿನ ಸಖ್ಯವನ್ನು ಕಡಿದುಕೊಂಡಿದೆ.
ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೆಪ್ಟೆಂಬರ್ 2023 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಘೋಷಿಸಿತ್ತು.
ತನ್ನ ದಿವಂಗತ ತಂದೆ ಮತ್ತು ಹಿರಿಯ ನಾಯಕ ಜಿ ಕೆ ಮೂಪನಾರ್ ಅವರು ಪಕ್ಷ ಸ್ಥಾಪಿಸಿದ ದಿನಗಳಿಂದ ತಮ್ಮ ಪಕ್ಷವು “ರಾಷ್ಟ್ರೀಯ ದೃಷ್ಟಿಕೋನ” ಹೊಂದಿದೆ ಎಂದು ವಾಸನ್ ಹೇಳಿದರು ಮತ್ತು ಬಿಜೆಪಿಯೊಂದಿಗೆ ಕೈಜೋಡಿಸುವ ನಿರ್ಧಾರವು ಬಲಿಷ್ಠ ಮತ್ತು ಸಮೃದ್ಧ ಭಾರತ, ತಮಿಳುನಾಡು ಮತ್ತು ತಮಿಳರ ಕಲ್ಯಾಣದಂತಹ ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.