ನವದೆಹಲಿ: ಫೆಬ್ರವರಿ 25 ರಂದು ಸುದರ್ಶನ ಸೇತು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಖಚಿತಪಡಿಸಿದ್ದಾರೆ.
ಮೂಲಸೌಕರ್ಯ ಅದ್ಭುತ ಎಂದೇ ಬಣ್ಣಸಲಾದ ಈ ಸೇತುವೆಯನ್ನು ಓಖಾ-ಬೇಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ, ಗುಜರಾತಿನ ದ್ವಾರಕದಲ್ಲಿ ನಿರ್ಮಾಣ ಮಾಡಲಾಗಿರುವ ಈ ಮೂಲಸೌಕರ್ಯ ಯೋಜನೆಯು ಈ ಪ್ರದೇಶದಲ್ಲಿ ಸಂಪರ್ಕವನ್ನು ಪರಿವರ್ತಿಸುತ್ತದೆ ಮತ್ತು ಪ್ರವಾಸೋದ್ಯಮವಡನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸುದ್ದಿ ಮಾಧ್ಯಮಗಳಿಗೆ ಈ ಬಗ್ಗೆ ಸಂದರ್ಶನ ನೀಡಿದ ಸಾಂಘ್ವಿ, ಪ್ರಧಾನಿಯ ಮೂಲಕ ಸೇತುವೆಯ ಉದ್ಘಾಟನೆಯ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ ಮತ್ತು ಉದ್ಘಾಟಬಾ ಕಾರ್ಯಕ್ರಮಕ್ಕಾಗಿ ದ್ವಾರಕಾದಲ್ಲಿ ಮಾಡಲಾದ ಅಮೋಘ ಅಲಂಕಾರಗಳ ಬಗ್ಗೆ ವಿವರಿಸಿದ್ದಾರೆ.
ಸುದರ್ಶನ್ ಸೇತು ಉಕ್ಕಿನ ಪೈಲಾನ್ಗಳು ಮತ್ತು ಫ್ಯಾನ್ನಂತಹ ಕೇಬಲ್ಗಳನ್ನು ಬಳಸಿಕೊಂಡು ವಿಹಂಗಮ ವಿನ್ಯಾಸವನ್ನು ಹೊಂದಿದೆ, ಈ ಸೇತುವೆಯು ರಾಷ್ಟ್ರವ್ಯಾಪಿ ಗಮನವನ್ನು ಸೆಳೆದಿದೆ, ದ್ವಾರಕಾದ ಹೆಗ್ಗುರುತಾಗಿದೆ. ಇದು ಓಖಾ ಪಟ್ಟಣವನ್ನು ಬೇಟ್ ದ್ವಾರಕಾ ದ್ವೀಪದೊಂದಿಗೆ ಸಂಪರ್ಕಿಸುತ್ತದೆ, ಈ ಹಿಂದೆ ದೋಣಿಯ ಮೂಲಕ ಮಾತ್ರ ಪ್ರವೇಶಿಸಬಹುದಾದ ಪ್ರದೇಶ ಇದಾಗಿತ್ತು. ಈ ಸೇತುವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ಸುಧಾರಿಸುತ್ತದೆ ಎನ್ನಲಾಗಿದೆ.
Tomorrow, Prime Minister @narendramodi ji will dedicate to the nation, Sudarshan Setu connecting Okha mainland and Beyt Dwarka island. It is built at a cost of around Rs. 980 crores. It is the longest Cable-stayed bridge in the country of around 2.32 Km.
Sudarshan Setu boasts a… pic.twitter.com/RUxDB8Kzbm
— BJP Scheduled Tribe Morcha (@BJPSTMORCHA) February 24, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.