ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ವಾರಣಾಸಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅಲ್ಲಿ ಅವರು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ವಾರಣಾಸಿ ಮೋದಿಯವರ ಲೋಕಸಭಾ ಕ್ಷೇತ್ರವೂ ಹೌದು.
ನಿನ್ನೆ ತಡರಾತ್ರಿ ಅವರು ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಪರಿಶೀಲಿಸಿದರು, ಇದು ವಾರಣಾಸಿ ಜನರಿಗೆ ಗುಣಮಟ್ಟದ ಜೀವನ ಕಲ್ಪಸಿಕೊಡುವ ನಿಟ್ಟಿನಲ್ಲಿನ ರೈಲ್ವೆ ಮತ್ತು ರಕ್ಷಣಾ ಸೇರಿದಂತೆ ವಿವಿಧ ಸಚಿವಾಲಯಗಳ ನಡುವಿನ ಸಮನ್ವಯವನ್ನು ಒಳಗೊಂಡಿರುವ ರಸ್ತೆ ಯೋಜನೆಯಾಗಿದೆ. ಈ ಯೋಜನೆಗೆ ರೂ 360 ಕೋಟಿ ವೆಚ್ಚವಾಗಿದೆ ಮತ್ತು ಇದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ (ಬಿಎಚ್ಯು) ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸಮಯವನ್ನು 75 ನಿಮಿಷಗಳಿಂದ 45 ನಿಮಿಷಗಳಿಗೆ ಕಡಿತಗೊಳಿಸಿದೆ.
ಇತ್ತೀಚೆಗೆ ಉದ್ಘಾಟಿಯಾದ ಸೇತುವೆಯನ್ನು ಅವರು ವೀಕ್ಷಿಸಿದ್ದು, ವಿಮಾನ ನಿಲ್ದಾಣ, ಲಕ್ನೋ, ಅಜಂಗಢ ಮತ್ತು ಘಾಜಿಪುರದ ಕಡೆಗೆ ಹೋಗಲು ಬಯಸುವ ದಕ್ಷಿಣ ಭಾಗ, BHU, BLW, ಇತ್ಯಾದಿಗಳ ಸುತ್ತಲೂ ವಾಸಿಸುವ ಸುಮಾರು 5 ಲಕ್ಷ ಜನರಿಗೆ ಇದು ಸಹಾಯವಾಗಿದೆ. ಅದೇ ರೀತಿ ಲಹರ್ತಾರಾದಿಂದ ಕಚಹ್ರಿಗೆ ಇರುವ ಅಂತರವನ್ನು 30 ನಿಮಿಷದಿಂದ 15 ನಿಮಿಷಗಳಿಗೆ ಕಡಿಮೆ ಮಾಡುತ್ತಿದೆ.
ಇಂದು ವಾರಣಾಸಿಯಲ್ಲಿ ಮೋದಿ ಬಹು ಕೋಟಿ ರೂಪಾಯಿಗಳ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.