ಲಂಡನ್: ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತೆ ಯಾನಾ ಮಿರ್ ಅವರು ಬ್ರಿಟಿಷ್ ಸಂಸತ್ತಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅಲ್ಲಿ ಉಪಸ್ಥಿತರಿದ್ದವರನ್ನು ಆಶ್ಚರ್ಯಚಕಿತಗೊಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ತಾನು ಸುರಕ್ಷಿತವಾಗಿದ್ದೇನೆ ಮತ್ತು ನಾನು ಎಂದಿಗೂ ಭಯೋತ್ಪಾದನೆಗೆ ಹೆದರಿ ತನ್ನ ತವರು ದೇಶದಿಂದ ಪಲಾಯಣ ಮಾಡಿದ ಮಲಾಲಾ ಆಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಜಮ್ಮು ಕಾಶ್ಮೀರ ಸ್ಟಡಿ ಸೆಂಟರ್ ಯುಕೆ (ಜೆಕೆಎಸ್ಸಿ) ಆಯೋಜಿಸಿದ್ದು, ‘ಜಮ್ಮು ಮತ್ತು ಕಾಶ್ಮೀರದ ಅಧ್ಯಯನಕ್ಕೆ ಮೀಸಲಾದ ಚಿಂತನ-ಮಂಥನ’ ಇದಾಗಿದೆ.
“ನಾನು ಮಲಾಲಾ ಯೂಸುಫ್ಜಾಯ್ ಅಲ್ಲ. ಏಕೆಂದರೆ ನಾನು ಸ್ವತಂತ್ರಳಾಗಿದ್ದೇನೆ ಮತ್ತು ನನ್ನ ದೇಶ ಭಾರತದಲ್ಲಿ, ಭಾರತದ ಭಾಗವಾಗಿರುವ ಕಾಶ್ಮೀರದಲ್ಲಿರುವ ನನ್ನ ಮನೆಯಲ್ಲಿ ನಾನು ಸುರಕ್ಷಿತವಾಗಿದ್ದೇನೆ. ನಾನು ಎಂದಿಗೂ ನನ್ನ ತಾಯ್ನಾಡಿನಿಂದ ಓಡಿಹೋಗಬೇಕಾಗಿಲ್ಲ” ಎಂದು ಯಾನಾ ಮೀರ್ ಹೇಳಿದ್ದಾರೆ.
ಪಾಕಿಸ್ತಾನಿ ಕಾರ್ಯಕರ್ತೆ ಮತ್ತು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಜಾಯ್ ಅವರು ತಾಲಿಬಾನ್ ವಿಧಿಸಿದ ಹೆಣ್ಣುಮಕ್ಕಳ ಶಿಕ್ಷಣವನ್ನುವಿರೋಧಿಸಿದ ಕಾರಣಕ್ಕೆ ತಾಲಿಬಾನ್ ಭಯೋತ್ಪಾದಕರಿಂದ ಗುಂಡೇಟು ಅನುಭವಿಸಿ ಬಳಿಕ ಲಂಡನ್ನಲ್ಲಿ ಚಿಕಿತ್ಸೆ ಪಡೆದು ಅಲ್ಲೇ ನೆಲೆ ನಿಂತರು.
ತನ್ನ ಭಾಷಣದ ಸಮಯದಲ್ಲಿ ಮೀರ್ ಅವರು ನಾನೆಂದಿಗೂ ಮಾಲಲಾ ಆಗುವುದಿಲ್ಲ ಯಾಕೆಂದರೆ ನನ್ನ ದೇಶ ಭಾರತ ಭಯೋತ್ಪಾದನೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತದೆ ಎಂದಿದ್ದಾರೆ. ಅಲ್ಲದೇ, ಯುವಕರು ಹಿಂಸೆಯನ್ನು ದೂರವಿಡಲು ಮತ್ತು ಕ್ರೀಡೆ ಮತ್ತು ಶಿಕ್ಷಣದಲ್ಲಿ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುವಲ್ಲಿ ಭಾರತೀಯ ಸೇನೆಯ ಪ್ರಯತ್ನಗಳನ್ನು ಮಿರ್ ಶ್ಲಾಘಿಸಿದ್ದಾರೆ.
ಬ್ರಿಟಿಷ್ ಪಾರ್ಲಿಮೆಂಟ್ ಕಟ್ಟಡದಲ್ಲಿ ನಡೆದ ‘ಸಂಕಲ್ಪ್ ದಿವಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವ ಭಾರತದ ಹಕ್ಕನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು ಎಂದು ಜೆಕೆಎಸ್ಸಿ ತಿಳಿಸಿದೆ. ಹಾಜರಿದ್ದವರಲ್ಲಿ ಯುಕೆ ಸಂಸತ್ತಿನ ಸದಸ್ಯರು, ಸ್ಥಳೀಯ ಕೌನ್ಸಿಲರ್ಗಳು, ಸಮುದಾಯ ಮುಖಂಡರು ಮತ್ತು ಹೆಚ್ಚಿನವರು ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.