ನವದೆಹಲಿ: ಭಾರತವು ಮುಂಬರುವ ವರ್ಷಗಳಲ್ಲಿ USD 10 ಟ್ರಿಲಿಯನ್ ಆರ್ಥಿಕತೆಯ ಹಾದಿಯಲ್ಲಿದೆ ಮತ್ತು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆ ಎಂಬ ಸ್ಥಾನವನ್ನು ಪಡೆದುಕೊಳ್ಳುವ ಹಾದಿಯಲ್ಲಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೋರ್ಗೆ ಬ್ರೆಂಡೆ ಗುರುವಾರ ಹೇಳಿದ್ದಾರೆ. ಭಾರತ ಬೇರೆಲ್ಲೂ ಕಾಣದ ಆಶಾವಾದದ ಸ್ಥಳವಾಗಿದೆ ಎಂದು ಹೇಳಿದರು.
ವಿಶೇಷ ವೀಡಿಯೊ ಸಂದರ್ಶನದಲ್ಲಿ ಸುದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಮಯ ಪಕ್ವವಾದಾಗ ಭಾರತ ಸರ್ಕಾರದ ಸಹಯೋಗದೊಂದಿಗೆ WEF ಭಾರತ ಶೃಂಗಸಭೆನಡೆಸಲು ವಿಶ್ವ ಆರ್ಥಿಕ ವೇದಿಕೆ (WEF) ಆಶಿಸುತ್ತಿದೆ ಎಂದು ಹೇಳಿದರು.
”ಭಾರತದ ಆರ್ಥಿಕತೆಯು ಪ್ರಪಂಚದ ಎಲ್ಲಾ ದೊಡ್ಡ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ವರ್ಷ ದಾವೋಸ್ನಲ್ಲಿ ಭಾರತದ ಬಗ್ಗೆ ಹೆಚ್ಚಿದ ಆಸಕ್ತಿಯನ್ನು ನಾವು ನೋಡಿದ್ದೇವೆ ಮತ್ತು ಇದು ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಬ್ರೆಂಡೆ ಹೇಳಿದರು.
ಜಿನೀವಾ ಮೂಲದ WEF, ತನ್ನನ್ನು ಸಾರ್ವಜನಿಕ-ಖಾಸಗಿ ಸಹಕಾರಕ್ಕಾಗಿ ಅಂತರಾಷ್ಟ್ರೀಯ ಸಂಸ್ಥೆ ಎಂದು ವಿವರಿಸುತ್ತದೆ, ಪ್ರತಿ ವರ್ಷ ಜನವರಿಯಲ್ಲಿ ಸ್ವಿಸ್ ಸ್ಕೀ ರೆಸಾರ್ಟ್ ಪಟ್ಟಣವಾದ ದಾವೋಸ್ನಲ್ಲಿ ತನ್ನ ವಾರ್ಷಿಕ ಸಭೆಯನ್ನು ನಡೆಸುತ್ತದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದಾವೋಸ್ನಲ್ಲಿ ಸದಾ ತುಂಬಾ ಸ್ವಾಗತ ಪಡೆಯುತ್ತಾರೆ ಎಂದು ಬ್ರೆಂಡೆ ಹೇಳಿದ್ದಾರೆ.
” ಭಾರತಕ್ಕೆ ಬಂದಾಗ, ಪ್ರಪಂಚದಾದ್ಯಂತ ಕಂಡುಬರದ ಕೆಲವು ಆಶಾವಾದ ನಮ್ಮ ಅನುಭವಕ್ಕೆ ಬರುತ್ತದೆ. ನಾವು ಭೌಗೋಳಿಕ ರಾಜಕೀಯ ಹಿಂಜರಿತವನ್ನು ಎದುರಿಸುತ್ತಿದ್ದೇವೆ, ಆದರೆ ಇನ್ನೂ ನಾವು ಸಹಯೋಗ ಮಾಡಬಹುದಾದ ಕ್ಷೇತ್ರಗಳಿವೆ ಮತ್ತು ಆ ಪ್ರದೇಶಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ,” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.