ಮುಂಬಯಿ : ಕ್ರೀಡಾ ಲೋಕದ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ಕನ್ನಡತಿ ನೇಹಾ ಶೆಟ್ಟಿ ಕ್ರೀಡಾ ತಾರೆ ಆಗಿದ್ದಾರೆ. ಹನ್ನೆರಡು ವಯಸ್ಸಿನ ಈ ಬಾಲಕಿ ಇದೀಗ ವಿಶ್ವದಾದ್ಯಂತ ಹೆಸರುವಾಸಿ ಆಗಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಉಡುಪಿ ವಳಕಾಡು ನಿವಾಸಿ ಪ್ರಸ್ತುತ ದೋಹಾ ಕತಾರ್ನಲ್ಲಿ ನೆಲೆಯಾಗಿರುವ ನರೇಶ್ ಶೆಟ್ಟಿ ಹಾಗೂ ವಿಜಯಾ ಎನ್.ಶೆಟ್ಟಿ ದಂಪತಿ ಸುಪುತ್ರಿ. ಶ್ರೀ ಗುರು ಛಾಯಾ ವಳಕಾಡು ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ಮೊಮ್ಮಗಳು. ಪ್ರಸಕ್ತ ಡಿಪಿಎಸ್-ಎಂಐಎಸ್ ಶಾಲೆಯ ೭ನೇ ತರಗತಿಯ ವಿದ್ಯಾಥಿನಿ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಈ ಬಾಲೆ ಈಗಾಗಲೇ ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾಳೆ.
ನೇಹಾ ಶೆಟ್ಟಿ ಕತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ಜಿಸಿಸಿ ಮಟ್ಟದಲ್ಲಿ ಈವರೆಗೆ ಕಂಡಿರದ ಅದ್ಭುತವಾದ ಯಶಸ್ಸನ್ನು ತಂದು ಕೊಟ್ಟಿದ್ದಾರೆ. ಕುವೈಟ್ನಲ್ಲಿ ಇತ್ತೀಚೆಗೆ ನಡೆದ ಜಿಸಿಸಿ ದೇಶಗಳ ೧೨ವರ್ಷದೊಳಗಿನ ಸಿಂಗಲ್ಸ್ ಮತ್ತು ೧೪ ವರ್ಷದೊಳಗಿನ ಬಾಲಕಿಯರ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಅದ್ಭುತ ಜಯ ಸಾಧಿಸಿದ್ದಾರೆ. ಮಾತ್ರವಲ್ಲದೆ ೧೨ ವರ್ಷದೊಳಗಿನ ಸಿಂಗಲ್ಸ್ ಪಂದ್ಯಾಟದಲ್ಲಿ ನೇಹಾ ಶೆಟ್ಟಿ ನಂಬರ್ ಒನ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
೨೦೧೧ರಲ್ಲಿ ಈಕೆ ಬ್ಯಾಡ್ಮಿಂಟನ್ ತರಗತಿಗೆ ಸೇರಿಕೊಂಡಿದ್ದಳು. ಪ್ರಾರಂಭದಲ್ಲಿಯೇ ಆಕೆ ತನ್ನ ಕ್ರೀಡಾಸಕ್ತಿಯ ನ್ನು ಬ್ಯಾಡ್ಮಿಂಟನ್ ಆಟದಲ್ಲಿ ತೋರಿಸಿ ಕೊಟ್ಟಿದ್ದಳು. ಕತಾರ್ನಲ್ಲಿ ಗಳಿಸಿದ ಈ ಸಾಧನೆಗಳು ಕುವೈಟ್ನ ಜಿಸಿಸಿ ಮುಕ್ತ ಪಂದ್ಯಾಟದಲ್ಲಿ ಭಾಗವಹಿಸುವ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು.
ಇದು ನನ್ನ ಜೀವನದ ಒಂದು ಅಮೂಲ್ಯವಾದ ಹಂತ. ಈ ಸಂತೋಷದ ಕ್ಷಣದಲ್ಲಿ ಆಡಲು ಮಾತುಗಳೇ ಸಿಗುತ್ತಿಲ್ಲ. ನನ್ನ ಈ ಸಾಧನೆಗೆ ಹೆತ್ತವರು, ಗರು-ಹಿರಿಯರು ಮತ್ತು ಸ್ನೇಹಿತರ ಆಶೀರ್ವಾದ ಮತ್ತು ಸಹಕಾರ ಕಾರಣ” ಎಂದು ನೇಹಾ ಶೆಟ್ಟಿ ಹೇಳಿಕೊಂಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.