ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮಿತ್ಸೋಟಾಕಿಸ್ ಭಾರತಕ್ಕೆ ನಾಲ್ಕು ದಿನಗಳ ಪ್ರವಾಸದಲ್ಲಿದ್ದಾರೆ. ನವದೆಹಲಿಯಲ್ಲಿ ಇಂದಿನಿಂದ ಫೆಬ್ರವರಿ 23 ರವರೆಗೆ ನಡೆಯಲಿರುವ 9 ನೇ ರೈಸಿನಾ ಸಂವಾದದಲ್ಲಿ ಮಿತ್ಸೋಟಾಕಿಸ್ ಮುಖ್ಯ ಅತಿಥಿಯಾಗಿ ಮತ್ತು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಅಥೆನ್ಸ್ಗೆ ಹಿಂದಿರುಗುವ ಮುನ್ನ ಮುಂಬೈಗೂ ಅವರು ಭೇಟಿ ನೀಡಲಿದ್ದಾರೆ.
ದ್ವಿಪಕ್ಷೀಯ ಸಭೆಯಲ್ಲಿ ಉಭಯ ಮುಖಂಡರು 2030 ರ ವೇಳೆಗೆ ಎರಡೂ ದೇಶಗಳ ದ್ವಿಪಕ್ಷೀಯ ವ್ಯಾಪಾರವನ್ನು ಎರಡು ಪಟ್ಟು ಹೆಚ್ಚಿಸಲು ಒಪ್ಪಿಕೊಂಡರು. ಸಭೆಯಲ್ಲಿ ಕೃಷಿ, ಫಾರ್ಮಾ, ವೈದ್ಯಕೀಯ ಸಾಧನಗಳು, ತಂತ್ರಜ್ಞಾನಗಳು, ನಾವೀನ್ಯತೆ, ಕೌಶಲ್ಯದಿಂದ ಹಿಡಿದು ಹೊಸ ಅವಕಾಶಗಳವರೆಗೆ ಮಾತುಕತೆಗಳು ನಡೆದವು ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್, ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸಲು ಮತ್ತು ಅದನ್ನು ಕಾರ್ಯತಂತ್ರದ ಮಟ್ಟಕ್ಕೆ ನವೀಕರಿಸಲು ಎರಡೂ ದೇಶಗಳು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ. ಎರಡೂ ದೇಶಗಳು ಕೃಷಿ, ಪ್ರವಾಸೋದ್ಯಮ ಮತ್ತು ಸೈಬರ್ಸ್ಪೇಸ್ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಮಾತನಾಡಿವೆ ಎಂದು ಹೇಳಿದರು.
ಇದಕ್ಕೂ ಮುನ್ನ, ಇಂದು ಬೆಳಗ್ಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮಿತ್ಸೋಟಾಕಿಸ್ ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಿದರು.
ಇದು 15 ವರ್ಷಗಳ ನಂತರ ಗ್ರೀಸ್ನಿಂದ ಭಾರತಕ್ಕೆ ಮೊದಲ ದ್ವಿಪಕ್ಷೀಯ ರಾಷ್ಟ್ರ ಅಥವಾ ಸರ್ಕಾರದ ಮಟ್ಟದ ಭೇಟಿ ಇದಾಗಿದೆ. ಗ್ರೀಸ್ನಿಂದ ಭಾರತಕ್ಕೆ ಕೊನೆಯ ಪ್ರಧಾನಿ ಭೇಟಿ 2008 ರಲ್ಲಿ ನಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.