ಅಮೇಥಿ: ಬಿಜೆಪಿ ನಾಯಕಿ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಏಕಕಾಲದಲ್ಲಿ ಉತ್ತರಪ್ರದೇಶದ ಅಮೇಥಿಗೆ ಕಾಲಿಟ್ಟಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ಮೂಲಕ ಇಂದು ರಾಹುಲ್ ಅಮೇಥಿಗೆ ಆಗಮಿಸಿದರೆ, ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಲು ಸ್ಮೃತಿ ಆ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ಅವರಿಗೆ ನೇರ ಸವಾಲು ಎಸೆದಿರುವ ಇರಾನಿ, ಈ ಬಾರಿಯ ಲೋಕಸಭಾ ಚುನಾವಣೆಗೆ ಅಮೇಥಿಯಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ.
“2019 ರಲ್ಲಿ ರಾಹುಲ್ ಗಾಂಧೀ ಅಮೇಥಿಯನ್ನು ತೊರೆದರು, ಇಂದು ಅಮೇಥಿ ಅವರನ್ನು ತೊರೆದಿದೆ. ಅವರು ಆತ್ಮವಿಶ್ವಾಸ ಹೊಂದಿದ್ದರೆ ವಯನಾಡಿಗೆ ಹೋಗದೆ, ಅವರು ಅಮೇಥಿಯಿಂದ ಹೋರಾಡಲಿ” ಎಂದು ತಿಳಿಸಿದ್ದಾರೆ.
ತಮ್ಮ ಸಂಸದೀಯ ಕ್ಷೇತ್ರಕ್ಕೆ ನಾಲ್ಕು ದಿನಗಳ ಭೇಟಿಯ ಭಾಗವಾಗಿ ಅಮೇಥಿಯಲ್ಲಿ ಜನಸಂವಾದ್ ನಡೆಸಿದ ಇರಾನಿ, “ಅಮೇಥಿಯ ಖಾಲಿ ರಸ್ತೆಗಳು ರಾಹುಲ್ ಗಾಂಧಿ ಬಗ್ಗೆ ಜನರಿಗೆ ಏನನಿಸುತ್ತದೆ ಎಂಬುದನ್ನು ನಮಗೆ ತಿಳಿಸುತ್ತದೆ” ಎಂದು ಹೇಳಿದರು.
ಅಮೇಥಿ ರಾಜ್ಯದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು, ಅಲ್ಲಿ 2019 ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ಇರಾನಿ ವಿರುದ್ಧ ಸುಮಾರು 55,000 ಮತಗಳ ಅಂತರದಿಂದ ಸೋತಿದ್ದರು.
80 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶವು ಸಂಸತ್ತಿಗೆ ಹೆಚ್ಚಿನ ಸಂಖ್ಯೆಯ ಸಂಸದರನ್ನು ಕಳುಹಿಸುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಪಡೆದುಕೊಂಡಿತ್ತು. ಅದು ಸೋನಿಯಾ ಗಾಂಧಿಯವರ ರಾಯ್ಬರೇಲಿ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ, ಕೇರಳದ ವಯನಾಡಿನಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.