ನವದೆಹಲಿ: ಈ ವರ್ಷ ಭಾರತದಿಂದ 1 ಲಕ್ಷ ಪ್ರವಾಸಿಗರನ್ನು ಸ್ವಾಗತಿಸುವ ನಿರೀಕ್ಷೆಯಿದೆ ಎಂದು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಮಂಡಳಿ ಶುಕ್ರವಾರ ಹೇಳಿದೆ.
”2023 ರಲ್ಲಿ ನಾವು 79,000 ಭಾರತೀಯ ಪ್ರಯಾಣಿಕರಿಗೆ ಆತಿಥ್ಯ ನೀಡಿದ್ದೇವೆ, ಇದು ಕೋವಿಡ್ ಪೂರ್ವದ ಶೇಕಡಾ 82 ರಷ್ಟಿದೆ. 2019 ರಲ್ಲಿ, 95,000 ಭಾರತೀಯ ಸಂದರ್ಶಕರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದಾರೆ ಮತ್ತು ಈ ವರ್ಷ, ನಾವು ಭಾರತದಿಂದ 1,00,000 ಪ್ರವಾಸಿಗರನ್ನು ಪಡೆಯುವನಿರೀಕ್ಷೆಯಲ್ಲಿದ್ದೇವೆ” ಎಂದಿದೆ.
”ಭಾರತದ ಎರಡನೇ ಹಂತದ ನಗರಗಳಿಂದ ಪ್ರಯಾಣಿಕರನ್ನು ಆಕರ್ಷಿಸಲು ನಾವು ಹೆಚ್ಚು ಗಮನಹರಿಸಿದ್ದೇವೆ, ಇದು ನಮ್ಮ ಬೆಳವಣಿಗೆಗೆ ಬಹಳ ನಿರ್ಣಾಯಕವಾಗಿದೆ,” ಎಂದು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಮುಖ್ಯಸ್ಥ ನೆಲಿಸ್ವಾ ನ್ಕಾನಿ ತಿಳಿಸಿದರು.
ಭಾರತದ ಎರಡನೇ ಹಂತದ ನಗರಗಳಲ್ಲಿ ದೊಡ್ಡ ಸಾಮರ್ಥ್ಯವಿದೆ ಮತ್ತು ಅಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಮಂಡಳಿಯು ಹೂಡಿಕೆ ಮಾಡಬೇಕಾಗಿದೆ ಮತ್ತು ಬೇಡಿಕೆಯನ್ನು ಸೃಷ್ಟಿಸಲು ಮತ್ತು ಉತ್ತೇಜಕವಾದದ್ದನ್ನು ನೀಡಲು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.