ನವದೆಹಲಿ: 45 ಕೋಟಿ ಜನ್ ಧನ್ ಖಾತೆಗಳು ಇಲ್ಲಿಯವರೆಗೆ 2.1 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಫೆಡರಲ್ ಬ್ಯಾಂಕ್ನ 2024 ರ ವಾರ್ಷಿಕ ಸರ್ಕಾರ ಮತ್ತು ಸಾಂಸ್ಥಿಕ ವ್ಯವಹಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಠಾಕೂರ್, ಬ್ಯಾಂಕಿಂಗ್ ಕ್ಷೇತ್ರವು ಇಂದು ಸಾಲದ ಹಿಡಿತದಿಂದ ಹೊರಬಂದಿದೆ ಮತ್ತು ಸಾರ್ವಕಾಲಿಕ ಉನ್ನತ ಸಾಧನೆಯಲ್ಲಿದೆ ಎಂದು ಹೇಳಿದರು.
ಜನ್ ಧನ್ ಯೋಜನೆ ಆರಂಭಿಸುವಾಗ ಅನೇಕರು ಇದನ್ನು ಮೂದಲಿಸಿದರು, ಆದರೀಗ ಅದು ಅತ್ಯಂತ ಯಶಸ್ವಿಯಾಗಿದೆ. ನೋಟು ಅಮಾನ್ಯೀಕರಣದ ನಂತರ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಿದಾಗಲೂ ಇದೇ ರೀತಿಯ ಮನಸ್ಥಿತಿ ಇತ್ತು, ಆದರೆ ಇಂದು ಭೀಮ್ ಯುಪಿಐನಿಂದ ಸಣ್ಣ ಪಾವತಿಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಭಾರತವನ್ನು ದುರ್ಬಲ 5 ರಿಂದ ವಿಶ್ವದ ಅಗ್ರ 5 ಆರ್ಥಿಕತೆಗೆ ತೆಗೆದುಕೊಂಡ ಹೋಗಲಾಗಿದೆ ಮತ್ತು ಶೀಘ್ರದಲ್ಲೇ ದೇಶವನ್ನು 3 ನೇ ಅತಿದೊಡ್ಡ ಆರ್ಥಿಕತೆಗೆ ಕೊಂಡೊಯ್ಯಲಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಆರ್ಥಿಕ ಅಪರಾಧಿಗಳ ಮಸೂದೆಯನ್ನು ಹೊರತಂದಿದೆ ಮತ್ತು ಎಲ್ಲಾ ಅಪರಾಧಿಗಳನ್ನು ಭಾರತಕ್ಕೆ ಹಿಂತಿರುಗಿಸಲು ವಿದೇಶದಲ್ಲಿ ಇನ್ನೂ ಹೋರಾಡುತ್ತಿದೆ ಎಂದು ಸಚಿವರು ಪ್ರತಿಪಾದಿಸಿದರು. ಒಟ್ಟು ಅನುತ್ಪಾದಕ ಆಸ್ತಿಗಳು, ಎನ್ಪಿಎ ಶೇಕಡಾ 3.2 ಕ್ಕೆ ಇಳಿದಿದೆ ಮತ್ತು 2023 ರಲ್ಲಿ ಆಸ್ತಿಯ ಮೇಲಿನ ಆದಾಯವು ಶೇಕಡಾ 0.5 ರಿಂದ ಶೇಕಡಾ 0.79 ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.