ವದೆಹಲಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಪರಿಕಲ್ಪನೆಯ ಸಂದರ್ಭದ ಕುರಿತು ವಿವರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಭಾರತದ ಬೀದಿ ವ್ಯಾಪಾರಿಗಳು ಅತ್ಯಂತ ಕಠೋರವಾಗಿ ಬಾಧಿತರಾಗಿದ್ದ ಸಾಂಕ್ರಾಮಿಕ ಸಮಯದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು.
“ಸ್ವನಿಧಿ ಯೋಜನೆಯ ಗುರಿ ಬೀದಿ ವ್ಯಾಪಾರಿಗಳ ಸ್ವ ಉದ್ರ್ಯೋಗ, ಸ್ವಾವಲಂಬನನೆ, ಸ್ವಾಭಿಮಾನವನ್ನು ಪುನಃಸ್ಥಾಪಿಸಿದೆ” ಎಂದು ಅವರು ಹೇಳಿದರು.
ಇಂದು ನಡೆದ ಪ್ರಧಾನಮಂತ್ರಿ ಸ್ವಾನಿಧಿ ಮೆಗಾ ಶಿಬಿರದಲ್ಲಿ ಸಚಿವರು ಮಾತನಾಡಿದರು. ಈ ಕಾರ್ಯಕ್ರಮದ ಅಂಗವಾಗಿ 10,000 ಬೀದಿ ವ್ಯಾಪಾರಿಗಳಿಗೆ ಸಾಲ ವಿತರಿಸಲಾಯಿತು.
ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಸಾಧನೆಗಳ ಬಗ್ಗೆ ಗಮನ ಸೆಳೆದ ಸಚಿವರು, ಈ ಯೋಜನೆಯು 80.42 ಲಕ್ಷಕ್ಕೂ ಹೆಚ್ಚು ಸಾಲವನ್ನು 60.94 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲ ಒದಗಿಸಿದೆ. ಸಾಲದ ಮೌಲ್ಯ ರೂ. 10,678 ಕೋಟಿ ಆಗಿದೆ ಮತ್ತು ಇದು ಮೇಲಾಧಾರ ರಹಿತ ಮೊದಲ ವರ್ಕಿಂಗ್ ಕ್ಯಾಪಿಟಲ್ ಸಾಲ ಎಂದರು. ಮೊದಲ ಕಂತಿನಲ್ಲಿ 10,000, ಮತ್ತು ನಂತರ ರೂ. 20,000 ಮತ್ತು ಮೂರನೇ ಕಂತಿನಲ್ಲಿ ಕ್ರಮವಾಗಿ 50,000 ರೂ ಇದರಡಿ ಒದಗಿಸಲಾಗುತ್ತದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸೇರ್ಪಡೆಗೊಳಿಸುವುದರ ಜೊತೆಗೆ ಅವರ ಗೌರವ ಮತ್ತು ಘನತೆಗೆ ಕಾರಣವಾಗಿದೆ ಎಂದು ಅವರು ಹೇಳಿದರು. .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.