ಶ್ರೀನಗರ: ಶ್ರೀನಗರದಲ್ಲಿ ಒರ್ವ ಭಯೋತ್ಪಾದಕನನ್ನು ಬಂಧಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣವನ್ನು ಭೇದಿಸಿದ್ದಾರೆ. ಕಳೆದ ವಾರ ಪಂಜಾಬ್ನಿಂದ ವಲಸೆ ಬಂದ ಇಬ್ಬರು ಕಾರ್ಮಿಕರ ಮೇಲೆ ಉದ್ದೇಶಿತ ದಾಳಿಯ ಹಿಂದೆ ಇದ್ದ ಆದಿಲ್ ಮಂಜೂರ್ನನ್ನು ಇಂದು ಬಂಧಿಸಲಾಗಿದೆ.
ಅವನ ಬಳಿಯಿಂದ ಅಪರಾಧಕ್ಕೆ ಬಳಸಿದ ಆಯುಧ, ಪಿಸ್ತೂಲ್ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರನ್ನು ನೇಮಿಸಿಕೊಳ್ಳಲು ಪಾಕಿಸ್ತಾನದ ಹ್ಯಾಂಡ್ಲರ್ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದ್ದಾರೆ ಎಂದು ಈತನ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಹೇಳಿದ್ದಾರೆ.
“ಆದಿಲ್ ಮಂಜೂರ್ ಅವರನ್ನು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿಸಲಾಗಿದೆ. ಆತ ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್ನೊಂದಿಗೆ ಸಂಪರ್ಕ ಹೊಂದಿದ್ದ. ಇಲ್ಲಿ ಶ್ರೀನಗರದಲ್ಲಿ ಕೆಲವು ಭಯೋತ್ಪಾದಕ ದಾಳಿಯನ್ನು ಮಾಡಲು ಆತನ ಮೇಲೆ ಅವರು ಪ್ರಭಾವ ಬೀರಿದ್ದಾರೆ. ಅವನಿಂದ ಅಪರಾಧ ನಡೆಸಲು ಆಯುಧವನ್ನು ಸಹ ಒದಗಿಸಲಾಗಿದೆ. ಈಗ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಕಾಶ್ಮೀರ ಐಜಿಪಿ ವಿಕೆ ಬಿರ್ಡಿ ಹೇಳಿದ್ದಾರೆ.
#WATCH | J&K | IGP Kashmir VK Birdi gives details on the incident where two residents of Amritsar, Punjab were killed by terrorists in Srinagar, on February 7.
He says, "…Amritpal and Rohit (the deceased) worked as carpenters here. They were returning to their house in… pic.twitter.com/NJ9WNSuZhJ
— ANI (@ANI) February 13, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.