ಸಿಂಗಾಪುರ: ಸಿಂಗಾಪುರದ ಯುವ ದಂಪತಿಗಳಿಗೆ ಅಲ್ಲಿನ ಪ್ರಧಾನಿ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಮಕ್ಕಳನ್ನು ಹೊಂದುವಂತೆ ಅದಕ್ಕಾಗಿ ಸರ್ಕಾರದಿಂದ ಬೆಂಬಲವನ್ನೂ ನೀಡುವುದಾಗಿ ಮನವಿ ಮಾಡಿಕೊಂಡಿದ್ದಾರೆ.
ಚೀನೀ ಹೊಸ ವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದ ಪ್ರಧಾನಿ ಲೀ ಸೀನ್ ಲೂಂಗ್, ಡ್ರ್ಯಾಗನ್ ವರ್ಷದಲ್ಲಿ ಕುಟುಂಬಗಳಿಗೆ ಡ್ರ್ಯಾಗನ್(ಮಕ್ಕಳನ್ನು) ಭರಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅನೇಕ ಚೀನೀ ಮೂಲದ ಕುಟುಂಬಗಳು ಡ್ರ್ಯಾಗನ್ ವರ್ಷದಲ್ಲಿ ಜನಿಸಿದ ಮಕ್ಕಳನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸುತ್ತಾರೆ.
ತಮ್ಮ ಸರ್ಕಾರವು ಕುಟುಂಬಗಳಿಗಾಗಿಯೇ ಸಿಂಗಾಪುರವನ್ನು ನಿರ್ಮಿಸುತ್ತಿದೆ. ಜನರ ಮದುವೆ ಮತ್ತು ಪೋಷಕರ ಆಕಾಂಕ್ಷೆಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಲೂಂಗ್ ಹೇಳಿದರು.
ಪ್ರಪಂಚದಾದ್ಯಂತ ವಿಶೇಷವಾಗಿ ಅಭಿವೃದ್ಧಿ ಹೊಂದಿದ ಸಮಾಜಗಳಾದ ಸಿಂಗಾಪುರದಲ್ಲಿ ಫಲವತ್ತತೆ ದರಗಳು ಕಡಿಮೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಶಿಶುಗಳ ಆರೈಕೆ ಮತ್ತು ಕೆಲಸ-ಜೀವನಕ್ಕೆ ಬೆಂಬಲವನ್ನು ಹಂತಹಂತವಾಗಿ ಬಲಪಡಿಸಲಾಗಿದೆ, ಮಕ್ಕಳ ಬೆಳವಣಿಗೆಯ ವರ್ಷಗಳಲ್ಲಿ ಪೋಷಕರ ಹಿತ ರಕ್ಷಣೆ ಮಾಡಲಾಗುವುದು. ಸರ್ಕಾರವು ಪಾವತಿಸುವ ಪಿತೃತ್ವ ರಜೆಯನ್ನು ಇತ್ತೀಚೆಗೆ ಎರಡು ವಾರಗಳಿಂದ ನಾಲ್ಕು ವಾರಗಳಿಗೆ ಸ್ವಯಂಪ್ರೇರಣೆಯಿಂದ ದ್ವಿಗುಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಸಿಂಗಾಪುರದವರು ಈ ವಾರಾಂತ್ಯದಲ್ಲಿ ಚೀನೀ ಹೊಸ ವರ್ಷವನ್ನು ಆಚರಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.