ನವದೆಹಲಿ: ಹಲ್ದ್ವಾನಿ ಗಲಭೆ ಪ್ರಕರಣ ಪೂರ್ವ ಯೋಜಿತ, ಬುಲ್ಡೋಜರ್ ಕಾರ್ಯಾಚರಣೆಯನ್ನು ನಿಗದಿಪಡಿಸಿದ ದಿನದಂದು ಪೊಲೀಸರ ಮೇಲೆ ದಾಳಿ ನಡೆಸಲು ಪ್ರತಿಭಟನಾಕಾರರು ಪೂರ್ವಯೋಜನೆ ಮಾಡಿಕೊಂಡಿದ್ದರು ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಅವರು ಹೇಳಿದ್ದಾರೆ.
ಮಸೀದಿ ಧ್ವಂಸಗೊಳಿಸಿದ ಅರ್ಧ ಗಂಟೆಯ ನಂತರ ಹಿಂಸಾಚಾರ ಭುಗಿಲೆದ್ದಿತು ಮತ್ತು ಗಲಭೆಕೋರರು ಪೊಲೀಸ್ ಸಿಬ್ಬಂದಿಯನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಮೇಲ್ಛಾವಣಿಯ ಮೇಲೆ ಕಲ್ಲುಗಳನ್ನು ರಾಶಿ ಹಾಕಿದರು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಉದ್ದೇಶದಿಂದ ಪೆಟ್ರೋಲ್ ಬಾಂಬ್ಗಳನ್ನು ಎಸೆದರು ಎಂದು ಅವರು ಹೇಳಿದರು.
ಗುಪ್ತಚರ ವೈಫಲ್ಯಗಳ ಆರೋಪವನ್ನು ನಿರಾಕರಿಸಿದ ಅವರು, ಹಿಂಸಾಚಾರವನ್ನು ಆಶ್ರಯಿಸುವವರು ರಾಜ್ಯಕ್ಕೆ ಸವಾಲನ್ನೊಡ್ಡಿದ್ದಾರೆ ಎಂದರು.
ಮಸೀದಿ ನೆಲಸಮಗೊಳಿಸುವಿಕೆಯ ವೀಡಿಯೊವನ್ನು ಮಾಧ್ಯಮಗಳಿಗೆ ತೋರಿಸಿದ ಸಿಂಗ್, ಪೊಲೀಸ್ ಪಡೆ ಮತ್ತು ಆಡಳಿತವು ಯಾರನ್ನೂ ಪ್ರಚೋದಿಸುತ್ತಿಲ್ಲ ಅಥವಾ ಹಾನಿ ಮಾಡುತ್ತಿಲ್ಲ. ಹೈಕೋರ್ಟ್ ಆದೇಶದ ನಂತರ ಅತಿಕ್ರಮಣ ಮಾಡಿದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಇಡೀ ಪ್ರಕ್ರಿಯೆಯನ್ನು ಸರಿಯಾಗಿ ನಡೆಸಲಾಗಿದ್ದರೂ, ಅರ್ಧ ಗಂಟೆಯೊಳಗೆ ದೊಡ್ಡ ಗುಂಪು ನಮ್ಮ ಪುರಸಭೆಯ ಸಹಕಾರ ತಂಡದ ಮೇಲೆ ದಾಳಿ ಮಾಡಿದೆ. ದಾಳಿಗೆ ಮುಂಚಿತವಾಗಿ ಛಾವಣಿಯ ಮೇಲೆ ಕಲ್ಲುಗಳನ್ನು ರಾಶಿ ಹಾಕಲಾಗಿದೆ ಎಂದು ವಂದನಾ ಸಿಂಗ್ ಆರೋಪಿಸಿದ್ದಾರೆ.
“ನೆಲಸಮ ಕಾರ್ಯಾಚರಣೆಯು ಶಾಂತಿಯುತವಾಗಿ ಪ್ರಾರಂಭವಾಯಿತು, ಈ ವೇಳೆ ಪಡೆಗಳನ್ನು ನಿಯೋಜಿಸಲಾಗಿದೆ. ಆದರೂ ನಮ್ಮ ಮುನ್ಸಿಪಲ್ ಕಾರ್ಪೋರೇಶನ್ ತಂಡದ ಮೇಲೆ ಕಲ್ಲು ತೂರಲಾಯಿತು. ಕಲ್ಲುಗಳನ್ನು ಹೊಂದಿರುವ ಮೊದಲ ಗುಂಪನ್ನು ಚದುರಿಸಲಾಯಿತು ಮತ್ತು ಎರಡನೇ ಗುಂಪಿನಲ್ಲಿ ಪೆಟ್ರೋಲ್ ಬಾಂಬ್ ಇತ್ತು. ಇದು ಅಪ್ರಚೋದಿತವಾಗಿತ್ತು ಮತ್ತು ನಮ್ಮ ತಂಡವು ಯಾವುದೇ ಬಲವನ್ನು ಈ ವೇಳೆ ಬಳಸಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.