ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಮೀನುಗಾರಿಕೆ ಕ್ಷೇತ್ರವನ್ನು ಔಪಚಾರಿಕಗೊಳಿಸಲು ಮತ್ತು ಮೀನುಗಾರಿಕೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದದಡಿ ಕೇಂದ್ರ ವಲಯದ ಉಪ ಯೋಜನೆಯಾದ “ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ”ಗೆ ತನ್ನ ಅನುಮೋದನೆ ನೀಡಿದೆ.
ಈ ಉಪಯೋಜನೆಯನ್ನು ಪಿ.ಎಂ.ಎಂ.ಎಸ್.ವೈ.ಯ ಕೇಂದ್ರ ವಲಯದ ಘಟಕದ ಅಡಿಯಲ್ಲಿ 6,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೇಂದ್ರ ವಲಯದ ಉಪ ಯೋಜನೆಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ 50% ಅಂದರೆ ವಿಶ್ವ ಬ್ಯಾಂಕ್ ಮತ್ತು ಎಎಫ್ ಡಿ ಬಾಹ್ಯ ಹಣಕಾಸು ಸೇರಿದಂತೆ 3,000 ಕೋಟಿ ರೂ.ಗಳ ಸಾರ್ವಜನಿಕ ಹಣಕಾಸು, ಮತ್ತು ಉಳಿದ 50% ಅಂದರೆ 3,000 ಕೋಟಿ ರೂ.ಗಳು ಫಲಾನುಭವಿಗಳು / ಖಾಸಗಿ ವಲಯದ ಹತೋಟಿಯಿಂದ ನಿರೀಕ್ಷಿತ ಹೂಡಿಕೆಯಾಗಿದೆ. ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2023-24 ರಿಂದ 2026-27 ರವರೆಗೆ 4 (ನಾಲ್ಕು) ವರ್ಷಗಳವರೆಗೆ ಜಾರಿಗೆ ತರಲಾಗುತ್ತಿದೆ.
ಮೀನುಗಾರರು, ಮೀನು (ಜಲಚರ ಸಾಕಣೆ) ರೈತರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು ಅಥವಾ ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ ನೇರವಾಗಿ ತೊಡಗಿರುವ ಇತರ ವ್ಯಕ್ತಿಗಳು ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
40 ಲಕ್ಷ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಕೆಲಸ ಆಧಾರಿತ ಗುರುತುಗಳನ್ನು ಒದಗಿಸಲು ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆಯನ್ನು ರಚಿಸುವ ಉದ್ದೇಶವನ್ನು ಯೋಜನೆಯಡಿ ಹೊಂದಲಾಗಿದೆ.
ಸುಧಾರಿತ ಸೇವಾ ವಿತರಣೆಗಾಗಿ ಮೀನು ಕಾರ್ಮಿಕರ ಕೆಲಸ ಆಧಾರಿತ ಡಿಜಿಟಲ್ ಗುರುತಿಸುವಿಕೆಗಳನ್ನು ರಚಿಸುವುದು ಸೇರಿದಂತೆ ರಾಷ್ಟ್ರೀಯ ಮೀನುಗಾರಿಕೆ ವಲಯದ ಡಿಜಿಟಲ್ ವೇದಿಕೆಯಡಿ ಮೀನುಗಾರರು, ಮೀನು ಕೃಷಿಕರು ಮತ್ತು ಬೆಂಬಲಿತ ಕಾರ್ಮಿಕರ ಸ್ವಯಂ ನೋಂದಣಿಯ ಮೂಲಕ ಅಸಂಘಟಿತ ಮೀನುಗಾರಿಕೆ ಕ್ಷೇತ್ರವನ್ನು ಕ್ರಮೇಣ ಔಪಚಾರಿಕಗೊಳಿಸುವು ಗುರಿ ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.