ಹಲ್ದ್ವಾನಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗುರುವಾರ ಅಕ್ರಮ ಮದರಸಾ ಮತ್ತು ಪಕ್ಕದ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ವ್ಯಾಪಕ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 250 ಮಂದಿ ಗಾಯಗೊಂಡಿದ್ದಾರೆ. ನಗರವನ್ನು ಕರ್ಫ್ಯೂ ಘೋಷಿಸಲಾಗಿದೆ, ಗಲಭೆಕೋರರ ವಿರುದ್ಧ ಶೂಟ್-ಆಟ್-ಸೈಟ್ ಆದೇಶಗಳನ್ನು ಹೊರಡಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ನ್ಯಾಯಾಲಯದ ಆದೇಶದ ನಂತರ ಪೊಲೀಸರೊಂದಿಗೆ ಸರ್ಕಾರಿ ಅಧಿಕಾರಿಗಳ ತಂಡವು ಕಟ್ಟಡಗಳನ್ನು ನೆಲಸಮಗೊಳಿಸಲು ಪ್ರಯತ್ನಿಸಿದಾಗ ಘರ್ಷಣೆಯು ವಿಕೋಪಕ್ಕೆ ತೆರಳಿದೆ. ಮದ್ರಸಾ ಮತ್ತು ಮಸೀದಿಯನ್ನು ಆಡಳಿತವು ಕಾನೂನುಬಾಹಿರವೆಂದು ಘೋಷಿಸಿದೆ, ಹೀಗಾಗಿ ಅದರ ಧ್ವಂಸ ಕಾರ್ಯಕ್ಕೆ ಮುಂದಾಗಲಾಯಿತು. ಆದರೆ, ಈ ಕ್ರಮವು ಹಲ್ದ್ವಾನಿಯ ವನ್ಭುಲ್ಪುರ ಪ್ರದೇಶದ ನಿವಾಸಿಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು.
ಘರ್ಷಣೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ, ಹಲವಾರು ಆಡಳಿತ ಅಧಿಕಾರಿಗಳು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರು ಸಹ ಘರ್ಷಣೆಯಲ್ಲಿ ಸಿಕ್ಕಿಬಿದ್ದರು. ಉದ್ರಿಕ್ತರ ದೊಡ್ಡ ಗುಂಪು ಅಧಿಕಾರಿಗಳ ಮೇಲೆ ಕಲ್ಲುಗಳನ್ನು ಎಸೆದ ಕಾರಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಪೊಲೀಸ್ ಠಾಣೆಯ ಹೊರಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ಹೆಚ್ಚಾಯಿತು.
ಭಾರೀ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್ಟೆಬ್ಯುಲರಿ (ಪಿಎಸಿ) ಉಪಸ್ಥಿತಿಯೊಂದಿಗೆ ಅಕ್ರಮ ಕಟ್ಟಡ ಕೆಡವುವಿಕೆ ಕಾರ್ಯ ನಡೆಸಲಾಯಿತು. ಕೋರ್ಟಿನ ಆದೇಶಕ್ಕೆ ಬದ್ಧವಾಗಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.