ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಉತ್ತರಪ್ರದೇಶದ ವಿಧಾನಸಭೆಯಲ್ಲಿ ಮಾತನಾಡಿ, ಮಹಾಭಾರತದಲ್ಲಿ ಕೃಷ್ಣ ಐದು ಗ್ರಾಮಗಳನ್ನು ಕೇಳಿದರು, ಆದರೆ ಇಂದು ಹಿಂದೂ ಸಮಾಜವು ತಮ್ಮ ನಂಬಿಕೆಯ ಮೂರು ಕೇಂದ್ರಗಳಾದ ಅಯೋಧ್ಯೆ, ಕಾಶಿ ಮತ್ತು ಮಥುರಾಗಳನ್ನು ಮಾತ್ರ ಕೇಳುತ್ತಿದೆ ಎಂದು ಹೇಳಿದರು.
“ಹಿಂದಿನ ಸರ್ಕಾರಗಳು ಅಯೋಧ್ಯೆ ನಗರವನ್ನು ನಿಷೇಧಗಳು ಮತ್ತು ಕರ್ಫ್ಯೂಗಳ ವ್ಯಾಪ್ತಿಗೆ ತಂದವು. ಶತಮಾನಗಳವರೆಗೆ, ಅಯೋಧ್ಯೆಯು ಕೆಟ್ಟ ಉದ್ದೇಶಗಳಿಂದ ಶಾಪಗ್ರಸ್ತವಾಗಿತ್ತು. ಯೋಜಿತ ತಿರಸ್ಕಾರವನ್ನು ಎದುರಿಸಿತು. ಸಾರ್ವಜನಿಕ ಭಾವನೆಗಳಿಗೆ ಇಂತಹ ವರ್ತನೆಯನ್ನು ಬಹುಶಃ ಬೇರೆಲ್ಲಿಯೂ ನೋಡಿರಲಿಲ್ಲ. ಅಯೋಧ್ಯೆಯು ಅನ್ಯಾಯವನ್ನು ಎದುರಿಸಿತು” ಎಂದು ಅವರು ಹೇಳಿದರು.
ಮಥುರಾದ ಕೃಷ್ಣ ಜನ್ಮಭೂಮಿ ಸ್ಥಳ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಸಂಕೀರ್ಣವು ಹಿಂದೂಗಳು ಹಕ್ಕು ಸಾಧಿಸುತ್ತಿರುವ ಇತರ ಎರಡು ವಿವಾದಿತ ಭೂಮಿ. ಈಗಾಗಲೇ ಅಯೋಧ್ಯೆ ಹಿಂದೂಗಳ ಸುಪರ್ದಿಗೆ ಸೇರಿದೆ.
“ಅಯೋಧ್ಯೆಗೆ ಅನ್ಯಾಯವಾಗಿದೆ, ನಾನು ಅನ್ಯಾಯದ ಬಗ್ಗೆ ಮಾತನಾಡುವಾಗ, ನಮಗೆ 5 ಸಾವಿರ ವರ್ಷಗಳಷ್ಟು ಹಳೆಯ ಕಥೆ ನೆನಪಾಗುತ್ತದೆ. ಭಗವಾನ್ ಶ್ರೀ ಕೃಷ್ಣನು ದುರ್ಯೋಧನನ ಬಳಿ ಅರ್ಧದಷ್ಟು ಆಸ್ತಿ ಕೇಳಿದರು, ಆದರೆ ಅದು ಕಷ್ಟವಾಗುದಾದರೆ ಐದು ಗ್ರಾಮಗಳನ್ನು ಮಾತ್ರ ನೀಡಿ ಎಂದು ಕೇಳಿದರು. ಆದರೆ ಇಲ್ಲಿನ ಹಿಂದೂ ಸಮಾಜ ಮತ್ತು ನಂಬಿಕೆ ಕೇವಲ ಮೂರರ ಬಗ್ಗೆ ಮಾತನಾಡುತ್ತಿದೆ. ಈ ಮೂರು ಸ್ಥಳಗಳು ನಮ್ಮ ನಂಬಿಕೆಯ ಕೇಂದ್ರಗಳಾಗಿವೆ” ಎಂದು ಅವರು ಹೇಳಿದರು.
हमने तो केवल तीन जगह मांगी…
श्री अयोध्या धाम का उत्सव लोगों ने देखा…
नंदी बाबा ने भी कहा कि हम काहे इंतजार करें…
हमारे कृष्ण कन्हैया कहां मानने वाले हैं… pic.twitter.com/yzqFAcicuP
— Yogi Adityanath (@myogiadityanath) February 7, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.