ರಾಯಚೂರು: ರಾಯಚೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಕೃಷ್ಣಾ ನದಿಯಲ್ಲಿ ಭಗವಾನ್ ವಿಷ್ಣುವಿನ ಪುರಾತನ ವಿಗ್ರಹವೊಂದು ಪತ್ತೆಯಾಗಿದೆ. ವಿಗ್ರಹದಲ್ಲಿ ವಿಷ್ಣುವಿನ ಎಲ್ಲಾ ಹತ್ತು ಅವತಾರಗಳನ್ನು ಚಿತ್ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಗ್ರಹವು ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ರಾಮಲಲ್ಲಾನ ವಿಗ್ರಹವನ್ನು ಹೋಲುವ ಲಕ್ಷಣಗಳನ್ನು ಹೊಂದಿದೆ. ಪ್ರತಿಮೆಯ ಜೊತೆಗೆ, ಪುರಾತನ ಶಿವಲಿಂಗವೂ ನದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ದೇವಾಲಯದ ಗರ್ಭಗುಡಿಯೊಳಗೆ ಇದ್ದ ವಿಗ್ರಹ ಇದಾಗಿರಬಹುದು ಮತ್ತು ದೇವಾಲಯವನ್ನು ನಾಶಪಡಿಸುವ ಸಮಯದಲ್ಲಿ ನದಿಯಲ್ಲಿ ಬಿದ್ದಿರಬಹುದು ಎಂದು ರಾಯಚೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಉಪನ್ಯಾಸಕಿ ಡಾ ಪದ್ಮಜಾ ದೇಸಾಯಿ ವಿಷ್ಣು ಅಭಿಪ್ರಾಯಪಟ್ಟಿದ್ದಾರೆ.
ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಕಂಡುಬರುವ ಈ ವಿಷ್ಣುವಿನ ವಿಗ್ರಹವು ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಡಾ ದೇಸಾಯಿ ಹೇಳಿದ್ದಾರೆ, ವಿಷ್ಣುವಿನ ಸುತ್ತ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಪರಶುರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಯಂತಹ ‘ದಶಾವತಾರ’ವನ್ನು ಚಿತ್ರಿಸಲಾಗಿದೆ ಎಂದಿದ್ದಾರೆ.
ವಿಗ್ರಹದ ವೈಶಿಷ್ಟ್ಯಗಳನ್ನು ವಿವರಿಸಿದ ಅವರಯ, ವಿಷ್ಣು ನಿಂತಿರುವ ಭಂಗಿಯಲ್ಲಿದ್ದಾನೆ ಮತ್ತು ಪ್ರತಿಮೆ ನಾಲ್ಕು ಕೈಗಳನ್ನು ಹೊಂದಿದೆ. ಮೇಲಿನ ಎರಡು ಕೈಗಳು ‘ಶಂಖ’ ಮತ್ತು ‘ಚಕ್ರ’ ಮತ್ತು ಎರಡು ಕೆಳಗಿನ ಕೈಗಳನ್ನು ವರಗಳನ್ನು ನೀಡುವ (‘ಕತಿ ಹಸ್ತ’ ಮತ್ತು ‘ವರದ ಹಸ್ತ’) ಚಿತ್ರಿಸಲಾಗಿದೆ ಎಂದಿದ್ದಾರೆ.
ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ವಿಗ್ರಹವು ವೆಂಕಟೇಶ್ವರನನ್ನು ಹೋಲುತ್ತದೆ ಎಂದು ತಿಳಿಸಿದರು.
ಆದರೆ ಈ ವಿಗ್ರಹವು ಸಾಮಾನ್ಯವಾಗಿ ವಿಷ್ಣುವಿನ ವಿಗ್ರಹಗಳಲ್ಲಿ ಕಂಡುಬರುವ ಗರುಡನನ್ನು ಒಳಗೊಂಡಿಲ್ಲ. ಬದಲಾಗಿ ಇಬ್ಬರು ಮಹಿಳೆಯರು ಇದರಲ್ಲಿದ್ದಾರೆ.
ವಿಷ್ಣುವು ಅಲಂಕಾರವನ್ನು ಇಷ್ಟಪಡುವ ಕಾರಣ, ನಗುತ್ತಿರುವ ವಿಷ್ಣುವನ್ನು ತೋರಿಸುವ ಈ ವಿಗ್ರಹವನ್ನು ಹೂಮಾಲೆ ಮತ್ತು ಆಭರಣಗಳಿಂದ ಅಲಂಕರಿಸಸಿದಂತೆ ಕೆತ್ತಲಾಗಿದೆ ಎಂದಿದ್ದಾರೆ.
“ಈ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಆರಾಧಿಸಿರಬೇಕು. ಪ್ರತಿಮೆಗೆ ಸ್ವಲ್ಪವೂ ಹಾನಿಯಾಗಿಲ್ಲ. ದೇವಾಲಯದ ಮೇಲೆ ದಾಳಿ ನಡೆದ ಸಮಯದಲ್ಲಿ ವಿಗ್ರಹಕ್ಕೆ ಹಾನಿಯಾಗದಂತೆ ನೀರಿನಲ್ಲಿ ಎಸೆದಿರಬಹುದು” ಎಂದಿದ್ದಾರೆ.
ಪುರಾತತ್ತ್ವ ಶಾಸ್ತ್ರಜ್ಞರು ಈ ವಿಗ್ರಹವು 11 ನೇ ಅಥವಾ 12 ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಿದ್ದಾರೆ.
An ancient idol of Lord Vishnu and Shivling was unearthed from the Krishna river at a village in Karnataka's Raichur district.
The idols are said to be from 11th century Kalyana Chalukyas dynasty. pic.twitter.com/Svb9hVhEei
— Anshul Saxena (@AskAnshul) February 6, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.