ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೆಲವೊಂದು ಸಲಹೆಯನ್ನು ನೀಡಿದ್ದು, ಪೋಸ್ಟರ್ಗಳು ಮತ್ತು ಕರಪತ್ರಗಳ ಹಂಚುವಿಕೆ ಅಥವಾ ಘೋಷಣೆ ಕೂಗುವಿಕೆ ಒಳಗೊಂಡಂತೆ ಯಾವುದೇ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸೂಚನೆಯನ್ನು ನೀಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಂಡ ವಿಚಾರದಲ್ಲಿ “ಶೂನ್ಯ ಸಹಿಷ್ಣುತೆ” ನೀತಿಯನ್ನು ಅನುಸರಿಸುವುದಾಗಿ ಚುನಾವಣಾ ಆಯೋಗವು ಸಲಹೆಯಲ್ಲಿ ತಿಳಿಸಿದೆ.
ರಾಜಕೀಯ ಮುಖಂಡರು ಮತ್ತು ಅಭ್ಯರ್ಥಿಗಳು ಮಕ್ಕಳನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ಪ್ರಚಾರಕ್ಕೆ ತೆರಳುವುದು, ಮಗುವನ್ನು ವಾಹನದಲ್ಲಿ ಅಥವಾ ಸಮಾವೇಶಗಳಲ್ಲಿ ಬಳಸುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಪ್ರಚಾರ ಚಟುವಟಿಕೆಗಳಿಗೆ ಬಳಸಬಾರದು ಎಂದು ತಿಳಿಸಿದೆ.
ಭಿತ್ತಿಪತ್ರ/ಕರಪತ್ರ ಹಂಚುವುದು ಅಥವಾ ಘೋಷಣೆ ಕೂಗುವುದು, ಪ್ರಚಾರ ಸಭೆಗಳು, ಚುನಾವಣಾ ಸಭೆಗಳು ಸೇರಿದಂತೆ ಯಾವುದೇ ರೂಪದಲ್ಲಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸದಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ. ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಯೋಗವು ‘ಶೂನ್ಯ ಸಹಿಷ್ಣುತೆ’ ನೀತಿ ತೆಗೆದುಕೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕವಿತೆಗಳು, ಹಾಡುಗಳು, ಮಾತುಗಳ ಮೂಲಕ ವಿರೋಧಿಗಳನ್ನು ಟೀಕೆ ಮಾಡಲು, ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಚಿಹ್ನೆಗಳ ಪ್ರದರ್ಶ ಮಾಡಲು ಮಕ್ಕಳನ್ನು ಬಳಸುವುದಕ್ಕೆ ಚುನಾವಣಾ ಸಮಿತಿ ನಿಷೇಧ ಹೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.