ನವದೆಹಲಿ: ನೂತನವಾಗಿ ನೇಮಕಗೊಂಡ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಇಂದು 2 ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ನಿರ್ಣಾಯಕ ವಿಶ್ವಾಸ ಮತ ಪರೀಕ್ಷೆಯನ್ನು ಎದುರಿಸಿದರು.
ಹೇಮಂತ್ ಸೊರೆನ್ ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಚಂಪೈ ಸೊರೆನ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದರು. ವಿಶ್ವಾಸಮತ ಯಾಚನೆಯ ಪರವಾಗಿ 47 ಮತಗಳು ಚಲಾವಣೆಯಾದವು. ಇದರ ವಿರುದ್ಧ 29 ಮತಗಳು ಬಿದ್ದವು. ಜಾರ್ಖಂಡ್ನಲ್ಲಿ 81 ಸ್ಥಾನಗಳಿವೆ, ಯಾವುದೇ ಒಂದು ಪಕ್ಷಕ್ಕೆ ಸರ್ಕಾರ ರಚಿಸಲು 41 ಶಾಸಕರ ಅಗತ್ಯವಿದೆ.
ಚಂಪೈ ಸೊರೆನ್ ಫೆಬ್ರವರಿ 2 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಬಹುಮತ ಸಾಬೀತುಪಡಿಸಲು ಫೆಬ್ರವರಿ 5 ರಂದು ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಸಿಎಂ ಚಂಪೈ ಸೊರೆನ್ ತಮ್ಮ ಭಾಷಣದಲ್ಲಿ ಮಾಜಿ ಸಿಎಂ ಹೇಮಂತ್ ಸೋರೆನ್ ಅವರು ಎಂದಿಗೂ ಮಾಡದ ಅಪರಾಧಗಳಿಗಾಗಿ ಬಂಧನಕ್ಕೊಳಗಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.