ನವದೆಹಲಿ: ಭಾರತ ವಿರೋಧಿ ನಿಲುವಿಗೆ ಅಂಟಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಇಂದು ಸಂಸತ್ತಿನಲ್ಲಿ ಮಾತನಾಡುತ್ತಾ, ನಮ್ಮ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಮಾಡಲು ಅಥವಾ ದುರ್ಬಲಗೊಳಿಸಲು ಯಾವುದೇ ದೇಶವನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಭಾರತೀಯ ಪಡೆಗಳು ಮಾಲ್ಡೀವ್ಸ್ನಿಂದ ಮೇ 10 ರೊಳಗೆ ನಿರ್ಗಮಿಸುತ್ತವೆ. ಈ ಬಗ್ಗೆ ಉಭಯ ದೇಶಗ ನಡುವೆ ಒಪ್ಪಂದ ಅಂತಿಮಗೊಂಡಿದೆ. ಈ ನಡುವೆ ಇಂದು ಮಯಿಝಿ ಇಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ದ್ವೀಪ ರಾಷ್ಟ್ರದಲ್ಲಿರುವ ಮೂರು ವಾಯುಯಾನ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ಭಾರತೀಯ ಪಡೆಗಳು ಮಾರ್ಚ್ 10 ರೊಳಗೆ ನಿರ್ಗಮಿಸುತ್ತವೆ ಮತ್ತು ಇನ್ನೆರಡು ಮೇ 10 ರೊಳಗೆ ಹೊರ ಹೋಗಲಿವೆ ಎಂದು ಅಧ್ಯಕ್ಷ ಮುಯಿಝು ಹೇಳಿದ್ದಾರೆ.
ಮಾಲ್ಡೀವ್ಸ್ ಎರಡು ಪ್ರಮುಖ ವಿರೋಧ ಪಕ್ಷಗಳು MDP ಮತ್ತು ಡೆಮೋಕ್ರಾಟ್ಗಳು ಅಧ್ಯಕ್ಷ ಮುಯಿಝು ಅವರ ಭಾಷಣವನ್ನು ಬಹಿಷ್ಕರಿಸಿವೆ. ಸಂಸತ್ತಿನಲ್ಲಿ ಕೇವಲ 24 ಸದಸ್ಯರು ಮಾತ್ರ ಭಾಷಣಕ್ಕೆ ಹಾಜರಾಗಿದ್ದರೆ, 56 ಮಂದಿ ಭಾಷಣವನ್ನು ಬಿಟ್ಟು ಹೊರ ನಡೆದಿದ್ದಾರೆ.
87 ಸ್ಥಾನಗಳ ಸಂಸತ್ತಿನಲ್ಲಿ ಎರಡು ಪ್ರತಿ ಪಕ್ಷಗಳು 56 ಸಂಸದರನ್ನು (43+13) ಹೊಂದಿವೆ. ಮುಯಿಝು ಸರ್ಕಾರದಲ್ಲಿ ಹುದ್ದೆಗಳನ್ನು ಪಡೆಯಲು ಏಳು ಸಂಸದರು ರಾಜೀನಾಮೆ ನೀಡಿದ್ದಾರೆ. ಈಗಿನ 80 ಸಂಸದರ ಪೈಕಿ 24 ಸಂಸದರು ಮಾತ್ರ ಮಯಿಝಿ ಭಾಷಣದ ವೇಳೆ ಹಾಜರಿದ್ದರು. ಮಾಲ್ಡೀವಿಯನ್ ಸಂಸತ್ತಿನ ಇತಿಹಾಸದಲ್ಲಿ ಇದು ಅತಿದೊಡ್ಡ ಬಹಿಷ್ಕಾರ ಎಂದು ಸ್ಥಳೀಯ ವರದಿಗಳು ಹೇಳಿವೆ.
ಮಾನವೀಯ ನೆರವು ಮತ್ತು ವೈದ್ಯಕೀಯ ಸ್ಥಳಾಂತರವನ್ನು ಒದಗಿಸಲು ಭಾರತವು ದ್ವೀಪ ರಾಷ್ಟ್ರದಲ್ಲಿ 87 ಸೈನಿಕರನ್ನು ನಿಯೋಜಿಸಿದೆ. ಮಯಿಝಿ ಮತ್ತು ಅವರ ಪಕ್ಷ ಇದಕ್ಕೆ ಹಿಂದಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.