ನವದೆಹಲಿ: ಫಿಜಿಯ ಉಪ ಪ್ರಧಾನ ಮಂತ್ರಿ ಬಿಮನ್ ಪ್ರಸಾದ್ ಅವರು ಕಳೆದ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಒಂದು ವಾರಗಳ ಕಾಲ ಅವರು ಭಾರತದಲ್ಲಿ ಇರಲಿದ್ದು, ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ನವದೆಹಲಿಗೆ ಆಗಮಿಸಿದ ಬಿಮನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಇಂಡೋ ಪೆಸಿಫಿಕ್) ಪರಮಿತ ತ್ರಿಪಾಠಿ ಸ್ವಾಗತಿಸಿದರು.
ಬಿಮನ್ ಅವರು ಫಿಜಿಯ ಉಪ ಪ್ರಧಾನಮಂತ್ರಿ ಮಾತ್ರವಲ್ಲದೇ ಹಣಕಾಸು, ಕಾರ್ಯತಂತ್ರ ಯೋಜನೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಅಂಕಿಅಂಶಗಳ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಫೆಬ್ರವರಿ 4 ರಿಂದ 10 ರವರೆಗೆ ಭಾರತದಲ್ಲಿ ಇರಲಿದ್ದು, ಫೆಬ್ರವರಿ 11 ರಂದು ನಿರ್ಗಮಿಸಲಿದ್ದಾರೆ. ಅವರು ಇಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ, ಜೊತೆಗೆ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ.
ಪ್ರಸಾದ್ ಅವರು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ ಮತ್ತು ಇನ್ನೊಂದು ಕಾರ್ಯಕ್ರಮಕ್ಕಾಗಿ ಬುಧವಾರ ಗೋವಾಕ್ಕೆ ತೆರಳಲಿದ್ದಾರೆ. ಗುರುವಾರ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಅಹಮದಾಬಾದ್ಗೆ ತೆರಳುತ್ತಾರೆ, ನಂತರ ಗಾಂಧಿನಗರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಸಾದ್ ಈ ಹಿಂದೆ ಫೆಬ್ರವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.