ನವದೆಹಲಿ: ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರನ್ಯಾ ಅಯ್ಯರ್ ಅವರಿಗೆ ಅವರ ದೆಹಲಿಯ ಜಂಗ್ಪುರ ಎಕ್ಸ್ಟೆನ್ಶನ್ನಲ್ಲಿರುವ ನಿವಾಸಿಗಳ ಕಲ್ಯಾಣ ಸಂಘ (RWA)ವು ಮನೆ ಖಾಲಿ ಮಾಡುವಂತೆ ಅಥವಾ ಕ್ಷಮೆಯಾಚನೆ ಮಾಡುವಂತೆ ನೋಟಿಸ್ ಜಾರಿ ಮಾಡಿದೆ. ಮಣಿ ಶಂಕರ್ ಅಯ್ಯರ್ ಅವರಿಗೂ ನೋಟಿಸ್ ನೀಡಲಾಗಿದೆ.
ಆರ್ಡಬ್ಲ್ಯೂಎ ನೋಟಿಸ್ನಲ್ಲಿ, ಸೂರನ್ಯಾ ಅವರಿಂದ ಕ್ಷಮೆಯಾಚಿಸಿ ಮಾತ್ರವಲ್ಲದೆ ಮಗಳ ಕೃತ್ಯವನ್ನು ಖಂಡಿಸಿ ಎಂದು ಮಣಿಶಂಕರ್ ಅವರನ್ನು ಒತ್ತಾಯಿಸಿದೆ. ಒಂದು ವೇಳೆ ನಿಮಗೆ ನೀವು ಮಾಡಿದ್ದೇ ಸರಿ ಎಂದು ಅನಿಸಿದರೆ ಕಾಲೋನಿಯಿಂದ ಹೊರಹೋಗುವಂತೆ ಸುರನ್ಯಾಗೆ ಒತ್ತಾಯಿಸಿತು.
ಜಂಗ್ಪುರ ಎಕ್ಸ್ಟೆನ್ಶನ್ ಆರ್ಡಬ್ಲ್ಯೂಎ ಅಧ್ಯಕ್ಷ ಡಾ ಕಪಿಲ್ ಕಾಕರ್ ಅವರು ಸಹಿ ಮಾಡಿದ ಪತ್ರದಲ್ಲಿ, ತಾವು ಮಾಡಿದ್ದು ಸರಿ ಎಂದು ಸುರನ್ಯಾ ಅವರು ನಂಬಿದ್ದಲ್ಲಿ ಮತ್ತೊಂದು ವಸತಿ ಕಾಲೋನಿಗೆ ತೆರಳುವಂತೆ ಕೇಳಿಕೊಂಡಿದ್ದಾರೆ.
“ಕಾಲೋನಿಯಲ್ಲಿ ಶಾಂತಿ ಕದಡುವ ಅಥವಾ ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ನಿವಾಸಿಗಳ ಅಟ್ಟಹಾಸವನ್ನು ನಾವು ಪ್ರಶಂಸಿಸುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ವಿರುದ್ಧ ನೀವು ಮಾಡಿದ ಕೃತ್ಯ ನಿವಾಸಿಗಳಲ್ಲಿ ಆಕ್ರೋಶವುಂಟು ಮಾಡಿದೆ. ಜನರು ಮತ್ತು ಆರ್ಡಬ್ಲ್ಯೂಎಗಳು ನಿಮ್ಮೊಳಗಿನ ದ್ವೇಷಕ್ಕೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ” ಎಂದು ಪತ್ರದಲ್ಲಿ ಹೇಳಿದೆ.
ಸುರನ್ಯಾ ಅವರು ರಾಮ ಪ್ರತಿಷ್ಠಾಪನೆ ವಿರುದ್ಧ ಪೋಸ್ಟ್ ಹಾಕಿ, ಮುಸ್ಲಿಮರ ಪ್ರೀತಿ ಮತ್ತು ಅವರಿಗೆ ಬೆಂಬಲ ನೀಡಲು ಉಪವಾಸ ನಡೆಸುತ್ತಿದ್ದೇನೆ ಎಂದು ಜನವರಿ 22ರಂದು ಹೇಳಿಕೊಂಡಿದ್ದರು.
Mani Shankar Aiyar and his daughter have been asked to apologize for the rant against Ram Mandir and leave the colony by the Residential Colony Association. pic.twitter.com/gLnBmif5vV
— Rishi Bagree (@rishibagree) January 31, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.