ಲಂಡನ್: ವಿಜ್ಞಾನವನ್ನು ಪಸರಿಸುವ ಮೂಲಕ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಶ್ರಮಿಸುತ್ತಿರುವ ಯುಕೆಯ 9 ಯುವ ವಿಜ್ಞಾನಿಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಒಂಬತ್ತು ವಿಜ್ಞಾನಿಗಳಲ್ಲಿ ಮೂವರು ಭಾರತೀಯ ಮೂಲದ ಸಂಶೋಧಕರು ಸೇರಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಯುಕೆ ಯುವ ವಿಜ್ಞಾನಿಗಳಿಗೆ ಬ್ಲಾವಟ್ನಿಕ್ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ಔಷಧ, ತಂತ್ರಜ್ಞಾನ ಮತ್ತು ಪ್ರಪಂಚದ ತಿಳುವಳಿಕೆಯನ್ನು ಪರಿವರ್ತಿಸುವ ಸಂಶೋಧನೆಗಾಗಿ ಕೊಡಮಾಡಲಾಗುತ್ತದೆ. ರಾಸಾಯನಿಕ ವಿಜ್ಞಾನಗಳು, ಭೌತಿಕ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ಮತ್ತು ಜೀವ ವಿಜ್ಞಾನಗಳ ವಿಭಾಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಫೆಬ್ರವರಿ 27 ರಂದು ಲಂಡನ್ನಲ್ಲಿ ನಡೆಯುವ ಬ್ಲ್ಯಾಕ್-ಟೈ ಗಾಲಾ ಡಿನ್ನರ್ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಮೂಲದ ಪ್ರೊಫೆಸರ್ಗಳಾದ ರಾಹುಲ್ ಆರ್ ನಾಯರ್, ಮೆಹುಲ್ ಮಲಿಕ್ ಮತ್ತು ತನ್ಮಯ್ ಭಾರತ್ ಅವರನ್ನು ಗೌರವಿಸಲಾಗುತ್ತದೆ ಮತ್ತು ಅವರು ಒಟ್ಟು 480,000 ಪೌಂಡ್ಗಳ ಅನುದಾನವನ್ನು ಸ್ವೀಕರಿಸುತ್ತಾರೆ.
🎉The Blavatnik Awards and @nyasciences are excited to announce the Honourees of the 2024 Blavatnik Awards in the UK! Please join us in congratulating these nine incredible scientists sparking innovations that will transform our future world. Learn more: https://t.co/DlS3iZBxKm pic.twitter.com/HyurYfdIgf
— Blavatnik Awards (@BlavatnikAwards) January 17, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.