ಮಂಗಳೂರು: ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ 19 ರಿಂದ 21ರ ವರೆಗೆ ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸಹ್ಯಾದ್ರಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ.
ಮಂಗಳೂರು ಸಾಹಿತ್ಯ ಹಬ್ಬ ಎನ್ನುವ ಹೆಸರಲ್ಲಿ 2018ರಲ್ಲಿ ಆರಂಭಗೊಂಡ ಲಿಟ್ ಫೆಸ್ಟ್ ಹಿನ್ನೆಲೆ ಮತ್ತು ಉದ್ದೇಶ ಏನು ಅನ್ನೋದರ ಬಗ್ಗೆ ಸಾಮಾನ್ಯ ಜನರಿಗೆ ತಲುಪಿಸುವುದಕ್ಕಾಗಿ ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ತುಳು, ಕನ್ನಡ ಭಾಷೆಯಲ್ಲಿ ಸೇರಿದ್ದ ನೂರಾರು ಮಂದಿಯ ಮನ ಮುಟ್ಟುವಂತೆ ಅಭಿನಯಿಸಿ, ಸಾಹಿತ್ಯ ಹಬ್ಬಕ್ಕೆ ಬರುವಂತೆ ಕರೆಕೊಟ್ಟಿದ್ದಾರೆ.
ರಾಷ್ಟ್ರ ಮಟ್ಟದ ಚಿಂತಕರು, ಬರಹಗಾರರು ಬರಲಿದ್ದು, ಸಾಮಾನ್ಯ ಜನರ ಜೊತೆಗೂ ಸಂವಾದ ನಡೆಸಲಿದ್ದಾರೆ. ಇದಲ್ಲದೆ, ಸಾಹಿತ್ಯ ಅಭಿರುಚಿ ಉಳ್ಳವರನ್ನು ಸೇರಿಸಿ ಹರಟೆ ಹಬ್ಬ ಎನ್ನುವ ಪರಿಕಲ್ಪನೆಯೂ ಇದೆ. 2018ರಲ್ಲಿ ಅದ್ದೂರಿಯಾಗಿ ನಡೆದಿದ್ದ ಲಿಟ್ ಫೆಸ್ಟ್ ಹಬ್ಬವನ್ನು ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ಉದ್ಘಾಟಿಸಿದ್ದರು ಅನ್ನುವುದನ್ನು ಹಿಡಿದು ಪ್ರತಿವರ್ಷ ಲಿಟ್ ಫೆಸ್ಟ್ಗೆ ಬಂದು ಹೋದ ಸಾಹಿತ್ಯ ದಿಗ್ಗಜರ ಹೆಸರು ಸಹಿತ ಲಿಟ್ ಫೆಸ್ಟ್ ನಲ್ಲಿ ಸಾಮಾನ್ಯ ಜನರೂ ಪಾಲ್ಗೊಳ್ಳಬಹುದು. ಭಾರತ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಈ ಸಾಹಿತ್ಯ ಹಬ್ಬವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಬೀದಿ ನಾಟಕದ ಮೂಲಕ ತಿಳಿಸಿದ್ದಾರೆ.
ಜನವರಿ 16 ಮತ್ತು 17ರಂದು ಈ ಬೀದಿ ನಾಟಕ ಮಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ನಡೆಯಲಿದೆ. ಒಟ್ಟು ತಂಡವನ್ನು ಕಲಾವಿದೆ ದಿಶಾ ಶೆಟ್ಟಿ ಮುನ್ನಡೆಸುತ್ತಿದ್ದು, ಬೀದಿ ನಾಟಕದ ನಿರ್ದೇಶನವನ್ನು ಗೋವಿಂದದಾಸ ಕಾಲೇಜಿನ ಕಲ್ಚರಲ್ ಡೈರೆಕ್ಟರ್ ವಿನೋದ್ ಶೆಟ್ಟಿ ಕೃಷ್ಣಾಪುರ ಮಾಡಿದ್ದಾರೆ. ಲಿಟ್ ಫೆಸ್ಟ್ ಪೂರ್ವಭಾವಿಯಾಗಿ ಬೀದಿ ನಾಟಕ ಹಮ್ಮಿಕೊಂಡಿದ್ದು, ಸಾಹಿತ್ಯ ಹಬ್ಬಗಳು ಎಲ್ಲ ವರ್ಗದ ಜನಸಾಮಾನ್ಯರನ್ನು ತಲುಪಬೇಕು ಎನ್ನುವ ದೃಷ್ಟಿ ಇಟ್ಟುಕೊಂಡು ರೂಪಿಸಲಾಗಿದೆ.
Immerse yourself in a world of literature, discussions and cultural richness , in the 6th edition of Mangaluru Lit Fest from January 19th to 21st 2024 ✨
Inauguration is on 19th January at 5pm
📍Dr.TMA Pai International Convention Centre , Mangaluru#MlrLitFest pic.twitter.com/lPmAsDmrw0
— Mangaluru Lit Fest (@mlrlitfest) January 17, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.