ನವದೆಹಲಿ: ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಸಂದರ್ಭದಲ್ಲಿ ಭಗವಾನ್ ರಾಮನ ಹೆಸರಿನ ಸಿಹಿ ಖಾದ್ಯವನ್ನು ತಯಾರಿಸಲು ನಾಗ್ಪುರದಲ್ಲಿ ಬೃಹತ್ 15,000 ಲೀಟರ್ ಕಡಾಯಿ ಅನ್ನು ತಯಾರಿಸಲಾಗುತ್ತಿದೆ. ಭಗವಾನ್ ರಾಮನ ಭಕ್ತ ಹನುಮಂತನ ಹೆಸರನ್ನು ಇದಕ್ಕೆ ಇಡಲಾಗಿದೆ. ‘ಹನುಮಾನ್ ಕಡಾಯಿ’ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಕ್ರೇನ್ ಬಳಸಿ ಮಾತ್ರ ಮೇಲೆತ್ತಬಹುದು.
‘ಹನುಮಾನ್ ಕಡಾಯಿ’ ನೆಲದಿಂದ 6.5 ಅಡಿ ಎತ್ತರದಲ್ಲಿದೆ, ಅದರ ಸ್ಟ್ಯಾಂಡ್ ಸೇರಿದಂತೆ 15 ಅಡಿ ವ್ಯಾಸವಿದೆ. 1,800 ಕೆಜಿ ತೂಕದ ಕಡಾಯಿಗೆ ಅಯೋಧ್ಯೆಗೆ ಸಾಗಿಸಲಾಗುತ್ತಿದೆ. ಅದು ಅಲ್ಲಿಯೇ ಖಾಯಂ ಆಗಿ ಉಳಿಯಲಿದೆ.
“500 ವರ್ಷಗಳ ನಂತರ ಭಗವಾನ್ ರಾಮನು ತನ್ನ ಮನೆಗೆ ಮರಳುತ್ತಿರುವುದನ್ನು ಆಚರಿಸಲು ಅಯೋಧ್ಯೆಯಲ್ಲಿ 7,000 ಕೆಜಿ ‘ರಾಮ್ ಹಲ್ವಾ’ ತಯಾರಿಸಲಾಗುವುದು. ಇದನ್ನು ಜನವರಿ 29-31 ರ ಸುಮಾರಿಗೆ ತಯಾರು ಮಾಡಲಾಗುತ್ತದೆ” ಎಂದು ಕಡಾಯಿಯನ್ನು ನಿಯೋಜಿಸಿದ ಜನಪ್ರಿಯ ಬಾಣಸಿಗ ವಿಷ್ಣು ಮನೋಹರ್ ಹೇಳಿದ್ದಾರೆ.
ಜನವರಿ 22 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭದ ನಂತರ ಅಯೋಧ್ಯೆ ಬಾಗಿಲು ಭಕ್ತರಿಗೆ ತೆರೆಯಲಿದೆ. ಕಾರ್ಯಕ್ರಮದ ವಿಧಿವಿಧಾನಗಳು ಈಗಾಗಲೇ ಆರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.